ಹೋಂ ವೋಟಿಂಗ್ ಕುರಿತು ತರಬೇತಿ

ಹೋಂ ವೋಟಿಂಗ್ ಕುರಿತು ತರಬೇತಿ

ತುಮಕೂರು: ಮನೆಯಿಂದಲೇ ಮತದಾನ ಸೌಲಭ್ಯ ಕುರಿತು ಎಲೆಕ್ಟ್-೧ ತಂತ್ರಾಂಶದಲ್ಲಿ ಅಂಚೆ ಮತಪತ್ರದ ವಿವಿಧ ಹಂತದ ಪ್ರಕ್ರಿಯೆಗಳನ್ನು ನಮೂದಿಸುವ ಕುರಿತು ಅಪರ ಮುಖ್ಯ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳಿಗೆ ತರಬೇತಿಯನ್ನು ನೀಡಲಾಯಿತು.

ಹೋಂ ವೋಟಿಂಗ್ ಕುರಿತು ತರಬೇತಿ
ಜಿಲ್ಲಾಧಿಕಾರಿಗಳ ಕಚೇರಿ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಸದರಿ ತರಬೇತಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್, ಸಹಾಯಕ ಚುನಾವಣಾಧಿಕಾರಿಗಳು, ಅಂಚೆ ಮತಪತ್ರದ ಜಿಲ್ಲಾ ಮತ್ತು ವಿಧಾನಸಭಾ ಕ್ಷೇತ್ರವಾರು ನೋಡಲ್ ಅಧಿಕಾರಿಗಳು, ಬಿಎಲ್‌ಓ ಮೇಲ್ವಿಚಾರಕರು, ಸೆಕ್ಟರ್ ಅಧಿಕಾರಿಗಳು ಹಾಗೂ ತಹಶೀಲ್ದಾರರುಗಳು ಉಪಸ್ಥಿತರಿದ್ದರು.

ಬಿಎಲ್‌ಓಗಳು ಪಿಡಬ್ಲ್ಯೂಡಿ ಮತ್ತು ೮೫ ವರ್ಷ ಮೇಲ್ಪಟ್ಟ ಮತದಾರರಿಗೆ ಅವರ ಮನೆಗಳಿಗೆ ತೆರಳಿ ನಮೂನೆ-೧೨ಡಿಗಳನ್ನು ಹಂಚಿಕೆ ಮಾಡುವುದು ಮತ್ತು ಮತದಾನದ ಇಚ್ಛೆಯನ್ನು ಅರಿಯುವುದು, ಸದರಿ ಮತದಾರರು ಅಂಚೆ ಮತಪತ್ರಗಳ ಮೂಲಕ ಮತಚಲಾಯಿಸಲು ಇಚ್ಚೆಪಟ್ಟಲ್ಲಿ, ನಮೂನೆ-೧೨ಡಿಗಳಲ್ಲಿ ಅರ್ಜಿ ಸಲ್ಲಿಸಿದಲ್ಲಿ ಅಂಚೆ ಮತಪತ್ರಗಳನ್ನು ಹಂಚಿಕೆ ಮಾಡುವುದು, ಮತ ಚಲಾಯಿಸುವ ದಿನದಂದು ಬಿಎಲ್‌ಓ, ಸೆಕ್ಟರ್ ಅಧಿಕಾರಿ, ಮತಗಟ್ಟೆ ಅಧಿಕಾರಿಗಳು, ಮೈಕ್ರೋ ಅಬ್ಸರ್ವರ್‌ಗಳು, ವಿಡಿಯೋ ಗ್ರಾಫರ್‌ಗಳು ಮನೆಗಳಿಗೆ ತೆರಳಿ ಅಂಚೆ ಮತಪತ್ರಗಳನ್ನು ಸಂಗ್ರಹ ಮಾಡುವ ಬಗ್ಗೆ ಕುರಿತಂತೆ ತರಬೇತಿಯನ್ನು ಸಮಗ್ರವಾಗಿ ನೀಡಲಾಯಿತು.

ತುಮಕೂರು ಜಿಲ್ಲೆಯಲ್ಲಿ ಒಟ್ಟು ೩೧,೪೮೨ ವಿಕಲಚೇತನ ಮತದಾರರು, ೮೫ ವರ್ಷ ಮೇಲ್ಪಟ್ಟ ೨೮,೯೫೩ ಸೇರಿದಂತೆ ಒಟ್ಟು ೬೦,೪೩೫ ಮತದಾರರಿರುತ್ತಾರೆ.