ತುಮಕೂರು: ಮೋದಿಯಿಂದ ರಾಜ್ಯಕ್ಕೆ ಮೋಸ, ತುಮಕೂರಲ್ಲೊಬ್ಬ ನಪುಂಸಕ ಸಂಸದ ಇದ್ದಾನೆ ಎಂದು ಎಸ್.ಆರ್.ಶ್ರೀನಿವಾಸ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 26 ಜನ ಬಿಜೆಪಿ ಸಂಸದರಿದ್ದಾರೆ. ಮೋದಿ ಕಂಡ್ರೆ ಗಡ ಗಡ ಗಡ ನಡುಗಿ ಎದುರಿಗೆ ಬಂದ್ರೆ ಉಚ್ಛೆ ಉಯ್ಯುದುಕೋಳ್ತಾರೆ. ಅಂತಹವರನ್ನ ಆರಿಸಿಕಳಿಸಿದ್ದೀರಾ ಬಸವರಾಜು ಒಂದೇ ಒಂದು ದಿನ ಪಾರ್ಲಿಮೆಂಟ್ ನಲ್ಲಿ ಮಾತನಾಡಿದ ಉದಾಹರಣೆ ತೋರಿಸಿ.ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ ನಾನು ಓಪನ್ ಆಗಿ ಬಸವರಾಜುಗೆ ಹೇಳ್ತೀನಿ.ಅವರೇನಾದ್ರು ಮಾತನಾಡಿದ್ದು ಇದ್ರೆ ತಗೋಂಡು ಬಂದು ತೋರಿಸಿ ನೀವು ಗಂಡಾಗಿದ್ರೆ.ಯಾವು ಪುರುಷಾರ್ಥಕ್ಕಾಗಿ ಅಂತಹವರನ್ನ ಕಳಿಸ್ತೀರಾ?ರಾಜ್ಯದ ಅಭಿವೃದ್ಧಿ ಆಗಬೇಕು ಅಂದ್ರೆ ಮುದ್ದಹನುಮೇಗೌಡ್ರು ಗೆಲ್ಲಬೇಕು.ಮುದ್ದಹನುಮೇಗೌಡ್ರು ಪಾರ್ಲಿಮೆಂಟ್ ನಲ್ಲಿ ಮಾತನಾಡಿದ್ದಾರೆ ಇಂತಹವರು ಬೇಕಾಗಿರೋದು.ನಪುಂಸಕರು ನಮಗೆ ಬೇಕಾಗಿಲ್ಲ ಎಂದು ನೇರವಾಗಿ ಬಸವರಾಜು ವಿರುದ್ದ ಎಸ್.ಆರ್.ಶ್ರೀನಿವಾಸ್ ಹರಿಹಾಯ್ದಿದ್ದಾರೆ.
ಇವತ್ತು ರಾಜ್ಯದಲ್ಲಿ ಭೀಕರ ಬರಗಾಲ ಇದೆ.ಈ ಬರಗಾಲ ಎದುರಿಸೋಕೆ 18 ಸಾವಿರ ಕೋಟಿ ಕೇಂದ್ರ ಸರ್ಕಾರಕ್ಕೆ ಪರಿಹಾರ ಕೇಳಿರೋದು.ಇದುವರೆಗೂ ಒಂದು ಪೈಸ ಬಿಡುಗಡೆ ಮಾಡಿಲ್ಲ. ಈ ದೇಶ ಆಳ್ತಾ ಇರೋ ಸರ್ವಾಧಿಕಾರಿನಾ ಮೋದಿ..? ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರ ಪಾಲು ಕೊಡೋದು ಕೇಂದ್ರ ಸರ್ಕಾರ ಕರ್ತವ್ಯ.ಈ ಕರ್ತವ್ಯ ನಿರ್ವಹಣೆ ಮಾಡೋದ್ರಲ್ಲಿ ಮೋದಿ ಸರ್ಕಾರ ವಿಫಲವಾಗಿದೆ.ರಾಜ್ಯಕ್ಕಾಗಿರುವ ಅನ್ಯಾಯ ಸರಿಪಡಿಸಬೇಕು ಮೋದಿ ಕಳಿಸಬೇಕು ಅಂದ್ರೆ ನಮ್ಮ ಅಭ್ಯರ್ಥಿಗಳು ಗೆಲ್ಲಬೇಕು.28 ಜನ ಅಭ್ಯರ್ಥಿಗಳನ್ನ ಗೆಲ್ಲಿಸುವ ಕೆಲಸ ಮಾಡಬೇಕು ನೀವು ಎಂದರು.
ರಾಜ್ಯ ಇವತ್ತು ಕೇಂದ್ರವನ್ನು ಬೇಡುವ ಸ್ಥಿತಿಗೆ ಮೋದಿ ತಂದಿದ್ದಾರೆ.ಈ ರಾಜ್ಯದ ಜನ ನಮಗೆ ಆಗಿರುವ ಅನ್ಯಾಯ ನೋಡಿ ಕೂಡಾ ಸುಮ್ಮನೆ ಇರೋಕೆ ಆಗುತ್ತಾ.ಬಿಜೆಪಿಯವರಿಗೆ ಒಂದೇ ಅಜಂಡಾ ಜಾತಿ ಜಾತಿ ಧರ್ಮ ಧರ್ಮಗಳ ಸಂಘರ್ಷ ಉಂಟು ಮಾಡೋದು ದೇವರನ್ನ ತೋರಿಸೋದು.ಈ ಚುನಾವಣೆಯಲ್ಲಿ ಶ್ರೀರಾಮ ದೇವರನ್ನ ತೋರಿಸುತ್ತಾ ಇದ್ದಾರೆ.ನಾವು ಕೂಡಾ ಶ್ರೀರಾಮ ಭಕ್ತರೇ ನಾವು ಆಂಜನೇಯನಂಗೆ ಎದೆಬಗೆದು ತೋರಿಸ್ತಾ ಇಲ್ಲ.ಅಲ್ಲಿ ಶ್ರೀರಾಮನ ದೇವಾಲಯ ಕಟ್ಟಿದ್ರೆ ಇಲ್ಲಿರುವ ಬಡವನ ಹೊಟ್ಟೆಗೆ ಅನ್ನ ಬಿಳೋಲ್ಲ.ಸಿದ್ದರಾಮಯ್ಯ ಕೊಟ್ಟಿರೋ ಐದು ಕೆ.ಜಿ ಅಕ್ಕಿಯಿಂದ ಬಡವನ ಹೊಟ್ಟೆ ತುಂಬುತ್ತೆ.ಶ್ರೀರಾಮ ದೇವಾಲಯದಿಂದ ಬಡವನ ಹೊಟ್ಟೆ ತುಂಬಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಬಡವರ ಪರ ಹಿಂದುಳಿದ ವರ್ಗಗಳ ಪರ ಧ್ವನಿಯಾಗಿ ಕೆಲಸ ಮಾಡ್ತಾವರೆ. ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ಬಿಜೆಪಿ ಕೇಳ್ತಾರೆ ಅಂತಾ ಕೇಳಿದ್ದು.ವಾಸಣ್ಣ ಆ ಗುಂಪು ಈ ಗುಂಪು ಅಂತಾರೆ ನಮ್ಮ ತಾಯಾಣೆಗೂ ನಾನು ಕಾಂಗ್ರೆಸ್ ಗುಂಪು. ಮೊನ್ನೆ ಸಿದ್ದರಾಮಯ್ಯ ರಾಜೀನಾಮೆ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದರು.
ವಿ.ಸೋಮಣ್ಣ ನಾನು ಹರಿಯೋ ನೀರಿದ್ದಂತೆ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು,ವಿ.ಸೋಮಣ್ಣ ಕೊಡುಗೆ ಏನು ಸ್ವಾಮೀಜಿ ಕಾಲಿಗೆ ಬಿದ್ದಿದ್ದು ಬಿಟ್ರೆ ಬೇರೆನೂ ಇಲ್ಲ.ಸೋಮಣ್ಣ ನಾನು ನಿಂತ ನೀರಲ್ಲ ಹರಿಯೋ ನೀರು ಅಂದ್ರು ನೀವು ಎಲ್ಲಿಗೆ ಹರಿಯುತ್ತಿರಾ..? ನೀವು ಚಾಮರಾಜಪೇಟೆಲಿ ಹುಟ್ಟಿ ಚಾಮರಾಜನಗರಕ್ಕೆ ಹರಿದೆ. ಅಲ್ಲಿಂದ ಸಿದ್ದರಾಮಣ್ಣನ ಕ್ಷೇತ್ರ ವರುಣಗೆ ಹೋದೆ.ಈ ತುಮಕೂರಿಗೆ ಹರಿದುಕೊಂಡು ಬಂದು ಬಿಟ್ಟಿದ್ಯಾ ಹರಿಯೋ ನೀರು ಯಾರಿಗೂ ಉಪಯೋಗ ಆಗೋಲ್ಲ ಎಂದು ವಿ.ಸೋಮಣ್ಣ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.