ತುಮಕೂರಿನ ಇಬ್ಬರು ASPಗಳ ನಡುವೆ ಕುರ್ಚಿ ಬದಲಾವಣೆಗೆ ತೀವ್ರ ಪೈಪೋಟಿ ನಡೆದಿದೆ.
ಹಾಲಿ ASP [1] ಗೋಪಾಲ್ ರವರ ಜಾಗಕ್ಕೆ ASP ಪುರುಷೋತ್ತಮ್ [2] ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿದೆ ಎನ್ನಲಾಗುತ್ತಿದೆ.
ಇದರಿಂದ ASP ಗೋಪಾಲ್ ರವರು ಕೊಂಚ ಬೇಸರಗೊಂಡು ASP [1] ಜಾಗದಲ್ಲಿ ಮುಂದುವರೆಯಲು ಪ್ರಯತ್ನಿಸುತ್ತಿದ್ದಾರೆ
ಎನ್ನಲಾಗುತ್ತಿದೆ.
ಇಬ್ಬರು ಒಂದೇ ಬ್ಯಾಚಿನ ಪೊಲೀಸ್ ಅಧಿಕಾರಿಗಳು ಇಬ್ಬರೂ ಸಹ ನಿವೃತ್ತಿ ಅಂಚಿನಲ್ಲಿ ಇರುವರೆ ಹೀಗಿರುವಾಗ ಇಬ್ಬರು ಹೊಂದಾಣಿಕೆ ಮಾಡಿಕೊಂಡು ಜಿಲ್ಲೆಯಲ್ಲಿನ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಹೋಗುವ ಬದಲು ಕುರ್ಚಿ ಬದಲಾವಣೆಗೆ ಏಕೆ ಕಸರತ್ತು ಎಂಬ ಮಾತುಗಳು ನಾಗರೀಕ ವಲಯದಲ್ಲಿ ಕೇಳಿ ಬರುತ್ತಿದೆ.
ಗೃಹ ಸಚಿವರ ತವರು ಜಿಲ್ಲೆ ತುಮಕೂರಿನಲ್ಲಿ ಹಾಲಿ ಕಾನೂನು ಸುವ್ಯವಸ್ಥೆ ಬಗ್ಗೆ ಅಲ್ಲಲ್ಲಿ ಅಪ ಸ್ವರಗಳು ಕೇಳಿ ಬರುತ್ತಿದೆ ಇಂತಹ ಸಮಯದಲ್ಲಿ ಅಧಿಕಾರಿಗಳು ಕುರ್ಚಿ ಬದಲಾವಣೆಗೆ ಕಸರತ್ತು ನಡೆಸುವುದು ಎಷ್ಟು ಸರಿ…
ಗೋಪಾಲ್ ಅವರು ಸೌಮ್ಯ ಸ್ವಭಾವದ ಅಧಿಕಾರಿ ಅವರ ಬಗ್ಗೆ ಯಾವುದೇ ಆಪಾದನೆ ಇಲ್ಲ ಗೋಪಾಲ್ ರವರು ತುಮಕೂರಿಗೆ ಬರುವುದಕ್ಕೆ ಮೊದಲೇ ತುಮಕೂರು ASP [1] ಜಾಗಕ್ಕೆ ಪುರುಷೋತ್ತಮ್ ರವರು ಪ್ರಯತ್ನಪಟ್ಟಿದ್ದರು ಆ ಸಮಯದಲ್ಲಿ ಎಚ್ ಸಿ ಮಹದೇವಪ್ಪ ಅವರ ಪ್ರಭಾವದಿಂದ ಗೋಪಾಲ್ ರವರು ತುಮಕೂರು ASP [1] ಜಾಗಕ್ಕೆ ಬಂದಿದ್ದು ಗುಟ್ಟಾಗಿ ಏನು ಉಳಿದಿಲ್ಲ.
ಈಗ ASP [1] ಜಾಗಕ್ಕೆ ಪುರುಷೋತ್ತಮ್ ಅವರನ್ನು ಸರ್ಕಾರ ಆದೇಶಿಸಿದ್ದು ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಮಂತಿಯಾದ ಜಿ ಪರಮೇಶ್ವರ್ ಅವರ ಅಂತಿಮ ತೀರ್ಮಾನವೇ ಕುರ್ಚಿ ಬದಲಾವಣೆಗೆ ಅಂತ್ಯ ಕಾಣಲಿದೆ ಎಂಬ ಮಾತುಗಳು ಇಲಾಖೆ ವಲಯದಲ್ಲಿ ಕೇಳಿ ಬರುತ್ತಿದೆ.
