ಅಂದರ್ – ಬಾಹರ್ 1,06,180 ರೂ ವಶ

ತುಮಕೂರು : ಶಿರಾ ತಾಲೂಕಿನ ದೊಡ್ಡನಹಳ್ಳಿ ಕೆರೆ ಅಂಗಳದಲ್ಲಿ ಇಂದು ಮಧ್ಯಾಹ್ನ 1:30 ಸಮಯದಲ್ಲಿ ಶಿರಾ ನಗರದ ಮುತ್ತುರಾಜ ಹಾಗೂ ಇತರರು ಸೇರಿ ಅಂದರ್-ಬಾಹರ್ ಆಡುತ್ತಿದ್ದ ಮಾಹಿತಿ ತಿಳಿದ ಸೆನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಮಕೃಷ್ಣಯ್ಯ ನೇತೃತ್ವದಲ್ಲಿ ದಾಳಿ ಮಾಡಿ 1,06,180 ರೂ ನಗದು ಹಾಗೂ 13 ಮೊಬೈಲ್ 7 ಬೈಕ್ ಗಳನ್ನು ವಶಪಡಿಸಿಕೊಂಡು ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸೆನ್ ಠಾಣೆ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧಿಕಾರಿ ಅಶೋಕ್ ಕೆ.ವಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.