ತುಮಕೂರು: ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿ ಒಬ್ಬನ ಕಾಲಿಗೆ ನಗರ ಠಾಣೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಶುಕ್ರವಾರ ರಾತ್ರಿ ದಿಬ್ಬೂರಿನಲ್ಲಿ ನಡೆದಿದೆ.
ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ದಂತೆ ಆರೋಪಿಯನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ ವಶಪಡಿಸಿಕೊಳ್ಳಲು ಪೊಲೀಸರು ಆರೋಪಿ ಮನು (25) ಎಂಬಾತನನ್ನು ದಿಬ್ಬೂರಿಗೆ ಕರೆ ತಂದಿದ್ದರು.
ಆ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದಾಗ ನಗರ ಠಾಣೆ ಸಿಪಿಐ ದಿನೇಶ್ ಕುಮಾರ್ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ನಂತರ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ. ವಿ. ಹೇಳಿದ್ದಾರೆ.
ಮೊನ್ನೆ ರೋಹಿತ್ ನೇತೃತ್ವದ ಗುಂಪಿನೊಂದಿಗೆ ಪರಸ್ಪರ ಗಲಾಟೆ ನಡೆದು ಇಬ್ಬರು ಗಾಯಗೊಂಡಿದ್ದರು. ರೋಹಿತ್ ಮತ್ತವರ ತಂಡ ಇತ್ತೀಚೆಗೆ 2 ಗುಂಪು ಗಳಾಗಿದ್ದೆ ಈ ಘರ್ಷಣೆಗೆ ಕಾರಣವೆನ್ನಲಾಗಿದೆ.
ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು ಆ ಸಂಬಂಧ ಹಲವರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಮನು ನೀಡಿದ ಮಾಹಿತಿ ಮೇರೆಗೆ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ ವಶಪಡಿಸಿಕೊಳ್ಳಲು ದಿಬ್ಬೂರಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ.
ರೌಡಿಶೀಟರ್ ಗಳು ಯಾರ್ಯಾರು ಎಂದು ಮಾಹಿತಿ ತಿಳಿಯಬೇಕಿದೆ ಎಂದು ಎಸ್ಪಿ ಅಶೋಕ್ ತಿಳಿಸಿದರು.
ಪ್ರಕರಣದಲ್ಲಿ ಎಷ್ಟು ಜನ ಇದ್ದಾರೆ, ಘಟನೆ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿಯಬೇಕಿದೆ ಎಂದು ಎಸ್ ಪಿ ತಿಳಿಸಿದರು.
ರೌಡಿಶೀಟರ್ ಗಳು ಯಾರ್ಯಾರು ಎಂದು ಮಾಹಿತಿ ತಿಳಿಯಬೇಕಿದೆ ಎಂದು ಎಸ್ಪಿ ಅಶೋಕ್ ತಿಳಿಸಿದರು.
ಎಸ್ ಪಿ ರವರೊಂದಿಗೆ ಆಡಿಷನ್ ಎಸ್ಪಿ ಮರಿಯಪ್ಪ, ನಗರ ಡಿವೈಎಸ್ಪಿ ಚಂದ್ರಶೇಖರ್ ಇನ್ನಿತರ ಪೊಲೀಸ್ ಅಧಿಕಾರಿಗಳು ಇದ್ದರು.