ಮಳೆಯಿಂದ ತೊಂದರೆಯುಂಟಾದಲ್ಲಿ ದೂರವಾಣಿ ಸಂಖ್ಯೆ: 9449872599 ಕ್ಕೆ ಕರೆ ಮಾಡಿ

ಮಳೆಯಿಂದ ತೊಂದರೆಯುಂಟಾದಲ್ಲಿ ದೂರವಾಣಿ ಸಂಖ್ಯೆ: 9449872599 ಕ್ಕೆ ಕರೆ ಮಾಡಿ

ತುಮಕೂರು : ಮುಂದಿನ ದಿನಗಳಲ್ಲಿ ಮಳೆಯಿಂದಾಗಿ ಯಾವುದೇ ತೊಂದರೆಯುಂಟಾದಲ್ಲಿ ತುಮಕೂರು ಮಹಾನಗರ ಪಾಲಿಕೆಯ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 9449872599 ಕ್ಕೆ ಕರೆ ಮಾಡಿ ದೂರು ದಾಖಲಿಸಲು ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ತಿಳಿಸಿದ್ದಾರೆ.

ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಉಪ್ಪಾರಹಳ್ಳಿ, ಅಂತರಸನಹಳ್ಳಿ, ದಿಬ್ಬೂರು, ಸದಾಶಿವನಗರ, ಅಮಾನಿಕೆರೆ ಕೋಡಿಹಳ್ಳ, ಶೆಟ್ಟಿಹಳ್ಳಿ, ಶಾಂತಿನಗರ ಹಾಗೂ ಎಲ್ಲಾ ಅಂಡರ್ ಪಾಸ್‌ಗಳು ಮತ್ತು ಇತರೆ ಸ್ಥಳಗಳಲ್ಲಿ ಮಳೆಯಿಂದಾಗಿ ಉಂಟಾದ ಪ್ರವಾಹ/ಹಾನಿಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಸಾರ್ವಜನಿಕರಿಂದ ಬಂದ ದೂರುಗಳ ಬಗ್ಗೆ ಕ್ರಮಕೈಗೊಂಡು ಪಾಲಿಕೆ ಸಿಬ್ಬಂದಿಗಳು ಜೆಸಿಬಿ, ಜಟ್ಟಿಂಗ್ ಮತ್ತು ಸಕ್ಕಿಂಗ್ ಯತ್ರೋಪಕರಣಗಳಿಂದ ಸಮಸ್ಯೆಗಳನ್ನು ಪರಿಹರಿಸಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.