ತುಮಕೂರು : ತುಮಕೂರು ಕಾರ್ಮಿಕ ಅಧಿಕಾರಿಯಾಗಿ ನ್ಯಾಯಾಲಯದ ಆದೇಶದ ಮೇರೆಗೆ ಈ ಹಿಂದೆ ತುಮಕೂರು ಕಾರ್ಮಿಕ ಅಧಿಕಾರಿಯಾಗಿದ್ದ ಇಬ್ರಾಹಿಂ ಅವರು ಇಂದು ತುಮಕೂರು ಕಾರ್ಮಿಕ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು.
ಹಾಲಿ ಕಾರ್ಮಿಕ ಅಧಿಕಾರಿ ತೇಜಾವತಿ ಅವರನ್ನು ಈ ಹಿಂದೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸರ್ಕಾರ ವರ್ಗಾವಣೆ ಮಾಡಿ ಅವರ ಜಾಗಕ್ಕೆ ಇಬ್ರಾಹಿಂ ಅವರನ್ನು ವರ್ಗಾವಣೆ ಮಾಡಿ ಆದೇಶಿಸಿತ್ತು.
ತೇಜಾವತಿ ಅವರು ವರ್ಗಾವಣೆ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು, ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗಲೇ ಸರ್ಕಾರ ಮತ್ತೆ ತೇಜಾವತಿ ಅವರನ್ನು ತುಮಕೂರು ಕಾರ್ಮಿಕ ಅಧಿಕಾರಿಯನ್ನಾಗಿ ನೇಮಿಸಿತ್ತು.
ಸರ್ಕಾರದ ಆದೇಶವನ್ನು ಪ್ರಶ್ನಿಸಿ ಇಬ್ರಾಹಿಂ ರವರು ನ್ಯಾಯಾಲಯದ ಮೆಟ್ಟಿಲೇರಿದರು ಈಗ ನ್ಯಾಯಾಲಯ ಇಬ್ರಾಹಿಂ ಅವರು ತುಮಕೂರು ಕಾರ್ಮಿಕ ಅಧಿಕಾರಿಯಾಗಿ ಮುಂದುವರೆಯಬೇಕೆಂದು ಆದೇಶಿಸಿದೆ.