ತುಮಕೂರು : ಲೋಕಸಭಾ ಚುನಾವಣೆ-೨೦೨೪ಕ್ಕೆ ಸಂಬಂಧಿಸಿದಂತೆ ೧೯-ತುಮಕೂರು ಲೋಕಸಭಾ ಕ್ಷೇತ್ರಕ್ಕೆ (ಏಪ್ರಿಲ್ ೨೬ರಂದು) ನಡೆದ ಚುನಾವಣಾ ಮತದಾನವು ಶಾಂತಿಯುತವಾಗಿ ನಡೆದಿದ್ದು, ಬೆಳಿಗ್ಗೆ ೭ ರಿಂದ ಸಂಜೆ ೬ ಗಂಟೆಯವರೆಗೆ ಶೇ.೭೭.೯೧ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.
೧೨೮-ಚಿಕ್ಕನಾಯನಕನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ೧,೦೯,೫೮೬ ಪುರುಷ, ೧,೧೧,೯೭೯ ಮಹಿಳಾ ಹಾಗೂ ೨ ಇತರೆ ಸೇರಿ ಒಟ್ಟು ೨,೨೧,೫೬೭ ಮತದಾರರಿದ್ದು, ಈ ಪೈಕಿ ೧,೭೧,೨೧೩ ಮತದಾರರು ಮತ ಚಲಾಯಿಸಿದ್ದು, ಒಟ್ಟಾರೆ ಶೇ. ೭೭.೨೭ ಮತದಾನವಾಗಿರುತ್ತದೆ.
೧೩೫-ಗುಬ್ಬಿ ೯೧,೧೯೬ ಪುರುಷ, ೯೨,೫೦೬ ಮಹಿಳಾ ಹಾಗೂ ೧೦ ಇತರೆ ಒಟ್ಟು ೧೮೩೭೧೨ ಮತದಾರರಿದ್ದು, ಈ ಪೈಕಿ ಒಟ್ಟು ೧,೫೧,೫೫೪ ಮತದಾರರು ಮತ ಚಲಾಯಿಸಿದ್ದು, ಒಟ್ಟು ಶೇ.೮೨.೫೦ ಮತದಾನವಾಗಿರುತ್ತದೆ.
೧೩೪-ಕೊರಟಗೆರೆ ೧,೦೨,೮೩೭ ಪುರುಷ, ೧,೦೪,೫೧೩ ಮಹಿಳೆ ಹಾಗೂ ೧೧ ಇತರೆ ಸೇರಿ ಒಟ್ಟು ೨,೦೭,೩೬೧ ಮತದಾರರಿದ್ದು, ಈ ಪೈಕಿ ೧,೬೬,೫೫೩ ಮತದಾರರು ಮತ ಚಲಾಯಿಸಿದ್ದು, ಒಟ್ಟಾರೆ ಶೇ. ೮೦.೩೨ ಮತದಾನವಾಗಿರುತ್ತದೆ.
೧೩೮-ಮಧುಗಿರಿ ೯೭,೮೧೬ ಪುರುಷ, ೯೮,೦೧೯ ಮಹಿಳಾ ಹಾಗೂ ೬ ಇತರೆ ಸೇರಿ ಒಟ್ಟು ೧,೯೫,೮೪೧ ಮತದಾರರಿದ್ದು, ಈ ಪೈಕಿ ೧,೫೦,೯೧೩ ಮತದಾರರು ಮತ ಚಲಾಯಿಸಿದ್ದು, ಒಟ್ಟಾರೆ ಶೇ. ೭೭.೦೬ ಮತದಾನವಾಗಿರುತ್ತದೆ.
೧೨೯-ತಿಪಟೂರು ೯೦,೩೪೦ ಪುರುಷ, ೯೬೩೦೫ ಮಹಿಳಾ ಹಾಗೂ ೨ ಇತರೆ ಸೇರಿ ಒಟ್ಟು ೧.೮೬.೬೪೭ ಮತದಾರರಿದ್ದು, ಈ ಪೈಕಿ ೧,೫೦,೪೮೪ ಮತದಾರರು ಮತ ಚಲಾಯಿಸಿದ್ದು, ಒಟ್ಟಾರೆ ಶೇ. ೮೦.೬೨ ಮತದಾನವಾಗಿರುತ್ತದೆ.
೧೩೨-ತುಮಕೂರು ನಗರ ೧,೩೦,೬೮೮ ಪುರುಷ, ೧,೩೭,೨೯೭ ಮಹಿಳಾ ಹಾಗೂ ೨೭ ಇತರೆ ಸೇರಿ ಒಟ್ಟು ೨,೬೮,೦೧೨ ಮತದಾರರಿದ್ದು, ಈ ಪೈಕಿ ೧,೮೦,೫೭೦ ಮತದಾರರು ಮತ ಚಲಾಯಿಸಿದ್ದು, ಒಟ್ಟಾರೆ ಶೇ. ೬೭.೩೭ ಮತದಾನವಾಗಿರುತ್ತದೆ.
೧೩೦-ತುರುವೇಕೆರೆ ೯೧,೬೦೮ ಪುರುಷ, ೯೨,೯೬೦ ಮಹಿಳಾ ಹಾಗೂ ೦ ಇತರೆ ಸೇರಿ ಒಟ್ಟು ೧,೮೪,೫೬೮ ಮತದಾರರಿದ್ದು, ಈ ಪೈಕಿ ೧,೪೭,೭೩೮ಮತದಾರರು ಮತ ಚಲಾಯಿಸಿದ್ದು, ಒಟ್ಟಾರೆ ಶೇ. ೮೦.೦೫ ಮತದಾನವಾಗಿರುತ್ತದೆ.
೧೩೩-ತುಮಕೂರು ಗ್ರಾಮಾಂತರ
೧೦೪೯೯೪ ಪುರುಷ, ೧೦೮೫೯೧ ಮಹಿಳಾ ಹಾಗೂ ೧೬ ಇತರೆ ಸೇರಿ ಒಟ್ಟು ೨,೧೩,೬೦೧ ಮತದಾರರಿದ್ದು, ಈ ಪೈಕಿ ೧,೭೫,೩೫೯ ಮತದಾರರು ಮತ ಚಲಾಯಿಸಿದ್ದು, ಒಟ್ಟಾರೆ ಶೇ. ೮೨.೧೦ ಮತದಾನವಾಗಿರುತ್ತದೆ.