ಅಂದರ್-ಬಾಹರ್ 11,42,590 ರೂ ವಶ, 14 ಜನರ ಬಂಧನ

ತುಮಕೂರು: ತಾಲೂಕಿನ ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಹರೇಹಳ್ಳಿ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ ಅಡ್ಡೆ ಮೇಲೆ CEN ಠಾಣೆ ಪೊಲೀಸರು ದಾಳಿ ನಡೆಸಿ 11,42,590 ರೂ, ಮೂರು ಕಾರು, 17 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.

ಪಣಕ್ಕಿಟ್ಟಿದ್ದ ನಗದು, ಮೊಬೈಲ್ ಫೋನ್ ಗಳು, ಕಾರು ವಶಪಡಿಸಿಕೊಂಡು 14 ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

ಮಧ್ಯರಾತ್ರಿ ಜೂಜು ಅಡ್ಡ ಮೇಲೆ ದಾಳಿ ನಡೆಸಿರುವ ಸಿಇಎನ್ ರಾಣೆ ಇನ್ಸ್ಪೆಕ್ಟರ್ ಸಿ. ಎಚ್. ರಾಮಕೃಷ್ಣಯ್ಯ ಮತ್ತು ಸಿಬ್ಬಂದಿಗಳಾದ ನಟರಾಜು, ಸೈಮನ್ ವಿಕ್ಟರ್, ರಾಜಕುಮಾರ್, ರವಿ ಕುಮಾರ್ ರೆಡ್ಡಿ, ಮಾರುತಿ ಷ್, ಶಿವಕುಮಾರ್, ಅನಿಲ್ ಕುಮಾರ್, ನಾರಾಯಣ ಮತ್ತಿತರರು ದಾಳಿಯಲ್ಲಿ ಭಾಗವಹಿಸಿದ್ದರು.

ಕೇಂದ್ರ ವಲಯ ಐಜಿಪಿ ಲಾಬು ರಾಮ್, ಎಸ್ ಪಿ ಅಶೋಕ್ ಕೆ.ವಿ. ದಾಳಿಯಲ್ಲಿ ಭಾಗವಹಿಸಿದ್ದ ಸಿಪಿಐ ಮತ್ತು ಸಿಬ್ಬಂದಿಯ ಕಾರ್ಯವೈಕರಿ ಬಗ್ಗೆ ಪ್ರಶಂಸಿದ್ದಾರೆ.
ಪಣಕ್ಕಿಟ್ಟಿದ್ದ ನಗದು ಮೊಬೈಲ್ ಫೋನ್ ಗಳು ನೂರು ಕಾರು ವಶಪಡಿಸಿಕೊಂಡು 14 ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

ಗಾಂಜಾ ಇಟ್ಟುಕೊಂಡಿದ್ದ ವ್ಯಕ್ತಿ ಬಂಧನ

ತುಮಕೂರು: ನಗರದ ಹೊರಪೇಟೆ ಕರಿಬಸವ ಸ್ವಾಮಿ ದೇವಸ್ಥಾನದ ಮುಂಭಾಗ ಗಾಂಜಾ ಇಟ್ಟುಕೊಂಡಿದ್ದ ವ್ಯಕ್ತಿ ಒಬ್ಬನನ್ನು ಸಿಇಎನ್ ಕ್ರೈಂ ಠಾಣೆ ಪೊಲೀಸರು ಬಂಧಿಸಿ 50,000 ಮೌಲ್ಯದ ಗಾಂಜಾ ಪತ್ತೆ ಹಚ್ಚಿ ವಶ ಪಡಿಸಿಕೊಂಡಿದ್ದಾರೆ.

ಮಹಮ್ಮದ್ ಸಮೀರ್ (19) ಎಂಬಾತನೆ ಬಂದಿತ ವ್ಯಕ್ತಿ. ಈತನನ್ನ ವಿಚಾರಣೆ ಮಾಡಿ 1 ಕೆಜಿ 220 ಗ್ರಾಂ ಗಾಂಜಾ ವಶಪಡಿಸಿಕೊಂಡು ಮುಂದಿನ ಕ್ರಮ ಜರಗಿಸುತ್ತಿದ್ದಾರೆ.
ಸಿಇಎನ್ ಠಾಣೆ ಇನ್ಸ್ಪೆಕ್ಟರ್ ಸಿ.ಎಚ್. ರಾಮಕೃಷ್ಣಯ್ಯ ಮತ್ತು ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ. ಎಸ್ ಪಿ ಅಶೋಕ್ ಕೆ. ವಿ. ಸಿಪಿಐ ಮತ್ತು ಸಿಬ್ಬಂದಿ ಕಾರ್ಯವನ್ನು ಪ್ರಶಂಸಿಸಿದ್ದಾರೆ.