ಒತ್ತೆಯಾಳಾಗಿದ್ದ 11 ವರ್ಷದ ಬಾಲಕಿ ರಕ್ಷಣೆ

ಪತ್ರಿಕಾ ಸಂಪಾದಕನ ಕೊಲೆಗೆ ಸಂಚು ಪ್ರಕರಣ: ನಾಲ್ಕು ಮಂದಿ ಪೊಲೀಸರ ಅಮಾನತ್ತು

ತುಮಕೂರು ; ಒತ್ತೆಯಾಳಾಗಿದ್ದ 11 ವರ್ಷದ ಬಾಲಕಿಯನ್ನು ತುಮಕೂರು ನಗರ ಪೋಲಿಸರು ರಕ್ಷಿಸಿದ್ದಾರೆ.

ಜುಲೈ 3 ರಂದು ತುಮಕೂರು ಕಾರ್ಮಿಕ ಅಧಿಕಾರಿ ತೇಜಾವತಿ ಅವರಿಗೆ ದಿಬ್ಬೂರು ವಾಸಿ ಚೌಡಮ್ಮ ನೀಡಿದ ದೂರಿನ ಸಾರಾಂಶವೆಂದರೆ, ಚೌಡಮ್ಮನ ತಂಗಿ ಸುಜಾತ ಮತ್ತು ಆಕೆಯ ಗಂಡ ಶಂಕರ್ ಅವರು ಚೌಡಮ್ಮನ ಮಗಳಾದ ಶಿವಮ್ಮ ನನ್ನು ಬಲವಂತವಾಗಿ ಪುಸಲಾಯಿಸಿ ಚೌಡಮ್ಮನ ಒಪ್ಪಿಗೆ ಪಡೆಯದೆ ಅವರೊಂದಿಗೆ ಕರೆದುಕೊಂಡು ಹೋಗಿದ್ದು, ಇದುವರೆಗೂ ನನ್ನ ಮಗಳೊಂದಿಗೆ ಮಾತನಾಡಲು ಅವಕಾಶ ನೀಡಿಲ್ಲ.

ನಾನು ಕೇಳಿದಾಗೆಲ್ಲ ಶಾಲೆಗೆ ಸೇರಿಸಿರುವುದಾಗಿ ತಿಳಿಸಿದ್ದರೂ, ನಂತರ ನನಗೆ ಅನುಮಾನ ಬಂದು ವಿಚಾರಣೆ ಮಾಡಿದಾಗ, ನನ್ನ ಮಗಳನ್ನು 35,000 ಸಾವಿರಕ್ಕೆ ಕಡಪಾದ ಶ್ರೀರಾಮುಲು ಎಂಬುವರಿಗೆ ಒತ್ತೇ ಇಟ್ಟಿರುವುದಾಗಿ ತಿಳಿದು ಬಂದಿದೆ ಎಂದು ದೂರಿನಲ್ಲಿ ತಿಳಿಸಿದರು.

ಇದರ ಅನ್ವಯ ಕಾರ್ಮಿಕ ಅಧಿಕಾರಿ ತೇಜಾವತಿ ತುಮಕೂರು ಜಿಲ್ಲಾ ಎಸ್‍ಪಿ ರವರಿಗೆ ದೂರು ನೀಡಿದರು.

ಎಸ್ ಪಿ ಅವರ ಸೂಚನೆ ಮೇರೆಗೆ ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಬಾಲಕಿ ಶಿವಮ್ಮನ ಪತ್ತೆಗೆ ಮುಂದಾದ ಪೊಲೀಸರು ಆಂಧ್ರಪ್ರದೇಶದ ಕಡಪಾದ ಶ್ರೀರಾಮುಲು ಎಂಬುವರಿಗೆ ಶಿವಮ್ಮನನ್ನು ಒತ್ತೆ ಇಟ್ಟಿರುವುದು ತಿಳಿದು, ಬಾಲಕಿ ಶಿವಮ್ಮನನ್ನು ರಕ್ಷಿಸಿ ಪೋಷಕರ ವಶಕ್ಕೆ ಬಿಟ್ಟು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

ಬಾಲಕಿ ರಕ್ಷಣೆ ಕಾರ್ಯದಲ್ಲಿ ಎ ಎಸ್ ಪಿ ಮರಿಯಪ್ಪ, ಡಿಎಸ್ಪಿ ಚಂದ್ರಶೇಖರ್, ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ದಿನೇಶ್ ಕುಮಾರ್, ಪಿಎಸ್ಐ ಮಂಜುಳಾ , ಎ ಎಸ್ ಐ ಮಲ್ಲೇಶಯ್ಯ, ಮಹಿಳಾ ಹೆಡ್ ಕಾನ್ಸ್ಟೇಬಲ್ ಭವಾನಿ ಹಾಗೂ ಕಾನ್ಸ್ಟೇಬಲ್ ಸಂತೋಷ್ ಹಾಗೂ ಸಿಬ್ಬಂದಿ ಕಾರ್ಯಪ್ರವೃತ್ತ ರಾಗಿದ್ದರು ಎಂದು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.