ನಿಷೇಧಿತ ಗುಟುಕ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿರುವ ಪೊಲೀಸರು

ತುಮಕೂರು : ನಿಷೇಧಿತ ಗುಟುಕ ತಯಾರಿಸುತ್ತಿದ್ದೀರಾ ಎಂದು ಹೇಳಿ ವ್ಯಕ್ತಿ ಒಬ್ಬರಿಂದ 4 ಮಂದಿ ಪೊಲೀಸರು ಹಣ ವಸೂಲಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ನಗರದ ಹೊರವಲಯದಲ್ಲಿರುವ ತಂಬಾಕು ತಯಾರು ಘಟಕವೂಂದರಲ್ಲಿ ನಿಷೇಧಿತ ಗುಟುಕ ತಯಾರಿಸುತ್ತಿರುವ ಮಾಹಿತಿ ಬಂದಿದೆ ಎಂದು ಹೇಳಿ ತಂಬಾಕು ತಯಾರು ಘಟಕ್ಕೆ ಸಂಬಂಧಿಸಿದ ರಾಹುಲ್ ಎಂಬ ವ್ಯಕ್ತಿ ಒಬ್ಬನನ್ನು ಹೆದರಿಸಿ 4 ಮಂದಿ ಪೊಲೀಸರು ನಗರ ಡಿಎಸ್ಪಿ ಚಂದ್ರಶೇಖರ್ ಹೆಸರಿನಲ್ಲಿ ಲಕ್ಷಗಟ್ಟಲೆ ಹಣ ವಸೂಲಿ ಮಾಡಿದ್ದಾರೆ ಎಂದು ಪೊಲೀಸ್ ವಲಯದಲ್ಲಿ ಸುದ್ದಿಯಾಗಿದೆ.

ತಂಬಾಕು ತಯಾರಿಕೆ ಹೆಸರಿನಲ್ಲಿ ನಿಷೇಧಿತ ಗುಟುಕ ತಯಾರಿಸುತ್ತಿರುವುದಾಗಿ ಡಿಎಸ್ಪಿ ಕಚೇರಿಗೆ ದೂರು ಬಂದಿದೆ, ನೀವು ಡಿಎಸ್ಪಿ ಅವರನ್ನು ಭೇಟಿ ಮಾಡಿ ಎಂದು 4 ಮಂದಿ ಪೊಲೀಸರು ರಾಹುಲ್ ಎಂಬ ವ್ಯಕ್ತಿಯನ್ನು ಡಿಎಸ್ಪಿ ಕಚೇರಿಗೆ ಕರೆಸಿಕೊಂಡು, ನಾವು ಡಿಎಸ್ಪಿ ಚಂದ್ರಶೇಖರ್ ಅವರಿಗೆ ಹೇಳಿ ನಿಮಗೆ ತೊಂದರೆ ಆಗದ ಹಾಗೆ ನೋಡಿಕೊಳ್ಳುತ್ತೇವೆ ಎಂದು ಹೇಳಿ ಎರಡುವರೆ ಲಕ್ಷ ಹಣ ವಸೂಲಿ ಮಾಡಿದ್ದಾರೆ ಎಂಬ ಸುದ್ದಿ ಪೊಲೀಸ್ ವಲಯದಲ್ಲಿ ಚರ್ಚೆಯಾಗುತ್ತಿದೆ.

ಇದೇ ರೀತಿ ಹಲವು ಅಕ್ರಮ ದಂಧೆಗಳಿಂದ ಕೆಲ ಪೊಲೀಸರು ಉನ್ನತ ಅಧಿಕಾರಿಗಳ ಹೆಸರು ಹೇಳಿ ಹಣ ವಸೂಲಿ ಮಾಡುತ್ತಿದ್ದಾರೆ ಇದರಿಂದಲೇ ನಗರದಲ್ಲಿ ಅಕ್ರಮ ದಂಧೆಗಳು ಹೆಚ್ಚುತ್ತಿವೆ ಎಂಬ ಮಾತುಗಳು ಪೊಲೀಸ್ ಇಲಾಖಾ ವಲಯದಲ್ಲಿ ಕೇಳಿ ಬರುತ್ತಿದೆ.

ಈ ಸಂಬಂಧ ಉನ್ನತ ಅಧಿಕಾರಿಗಳು ಸೂಕ್ತ ತನಿಖೆ ಮಾಡಿ ಅಕ್ರಮ ದಂಧೆಗಳೊಂದಿಗೆ ಕೈಜೋಡಿಸಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬುದು ಪ್ರಾಮಾಣಿಕ ಪೊಲೀಸರ ಮಾತಾಗಿದೆ.