ಐದು ಮಂದಿ ಬಂಧನ 12 ಕೆಜಿ ಗಾಂಜಾ ವಶ

ತುಮಕೂರು: ಇಲ್ಲಿನ ಕ್ಯಾತ್ಸಂದ್ರ ಪೊಲೀಸರು ಐದು ಮಂದಿಯನ್ನು ಬಂಧಿಸಿ 12 ಕೆಜಿ ಗಾಂಜಾ ವಶಪಡಿಸಿ ಕೊಂಡಿದ್ದಾರೆ.

ಭೀಮಸಂದ್ರ ನಿವಾಸಿಗಳಾದ ದಿಲೀಪ್, ಸಂತೋಷ ಅಲಿಯಾಸ್ ಸಂತು, ರಂಗನಾಥ, ಹೆಗ್ಗನಹಳ್ಳಿ ವಾಸಿ ಪವನ್, ಮಾದಾವರ ಮೂಲದ ಪವನ್ ಕುಮಾರ್ ಎಂಬುವರೇ ಬಂದಿತರು. ದೇವರಾಯಪಟ್ಟಣದ ಬಳಿ ಐದು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ದಾಗ ಅಂಗಡಿಗಳು, ಶಾಲಾ ಕಾಲೇಜು ಬಳಿ ಗಾಂಜಾ ಮಾರಾಟ ಮಾಡಲು ವ್ಯವಸ್ಥೆ ಮಾಡಿಕೊಂಡಿದ್ದಾರೆಂದು ಪೊಲೀಸರ ತನಿಖೆ ಇಂದ ತಿಳಿದು ಬಂದಿದೆ. ಐವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗಟ್ಟಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ವಿ. ಅಶೋಕ್, ಆಡಿಶನ್ ಎಸ್ ಪಿ ಗಳಾದ ಮರಿಯಪ್ಪ, ಖಾದರ್, ಡಿ ವೈ ಎಸ್ ಪಿ ಚಂದ್ರಶೇಖರ್ ನೇತೃತ್ವದಲ್ಲಿ ಕ್ಯಾತ್ಸಂದ್ರ ಸಿಪಿಐ ರಾಮಪ್ರಸಾದ್, ಪಿ ಎಸ್ ಐ ಪ್ರಸನ್ನ ಕುಮಾರ್ ಮತ್ತು ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು. ಗಾಂಜಾ ವಶಪಡಿಸಿಕೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವೈಕರಿ ಬಗ್ಗೆ ಮೇಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.