ಲೈಟ್ ಕಂಬದ ಕೆಳಗೆ ಅಂದರ್-ಬಾಹರ್ : 8 ಮಂದಿ ಬಂಧನ

ತುಮಕೂರು : ಲೈಟ್ ಕಂಬದ ಕೆಳಗೆ ಅಂದರ್ ಬಾಹರ್ ಆಡುತ್ತಿದ್ದ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗುಬ್ಬಿ ಪಟ್ಟಣದ ಸುಭಾಷ್ ನಗರದ ಕೆರೆ ಅಂಗಳದ ರಸ್ತೆಯಲ್ಲಿರುವ ಲೈಟ್ ಕಂಬದ ಕೆಳಗೆ ಜೂ.20 ರಂದು ಗುಬ್ಬಿ ಪಟ್ಟಣದ ಶಾಂತಕುಮಾರ್ ಜೊತೆಗೆ ಇತರೆ 7 ಮಂದಿ ಅಂದರ್ – ಬಹರ್ ಆಡುತ್ತಿದ್ದ ಖಚಿತ ಮಾಹಿತಿ ತಿಳಿದ CEN ಪೊಲೀಸ್ ಇನ್ಸ್ಪೆಕ್ಟರ್ ರಾಮಕೃಷ್ಣಯ್ಯ ಮತ್ತು ಸಿಬ್ಬಂದಿಗಳಾದ ಶಾಂತಕುಮಾರ,ಚಿಕ್ಕಣ್ಣ,ದ್ವಾರಕೀಶ್,ರಾಜಕುಮಾರ, ನಾರಾಯಣ,ಮಾರುತೇಶ್ ಮತ್ತು ಹರೀಶ್ ಅವರುಗಳು ದಾಳಿ ಮಾಡಿ ಪಣಕ್ಕಿಟ್ಟಿದ್ದ 1,19,950 ರೂ,9 ಸೆಲ್ ಫೋನ್ ,2 ಬೈಕ್ ಗಳನ್ನು ವಶಪಡಿಸಿಕೊಂಡು ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

CEN ಪೊಲೀಸರ ಕಾರ್ಯಕ್ಕೆ ಜಿಲ್ಲಾ ಎಸ್ ಪಿ ಅಶೋಕ್ ಕೆ ವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.