ಅಟಿಕಾ ಬಾಬು ಬಂಧನ

ಅಟಿಕಾ ಬಾಬು ಬಂಧನ

ತುಮಕೂರು: ಖದೀಮನೊಬ್ಬ ಕದ್ದು ತನ್ನ ಪತ್ನಿಯ ಕಡೆಯಿಂದ ಮಾರಿಸುತ್ತಿದ್ದ ಚಿನ್ನದ ಆಭರಣವನ್ನು ಖರೀದಿ ಮಾಡಿದ್ದ ಹೆಸರಾಂತ ಕಂಪನಿಯ ಮುಖ್ಯಸ್ಥ ನನ್ನ ತುರುವೇಕೆರೆ ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಅಟ್ಟಿಕಾ ಗೋಲ್ಡ್ ಕಂಪನಿಯ ನಿರ್ದೇಶಕ ಬಾಬು ಅಲಿಯಾಸ್ ಪಿ. ಎಸ್. ಆಯುಬ್ (44) ಎಂಬುವವರೇ ಬಂದಿದ್ದರು.

ಬೆಂಗಳೂರಿನ ಇವರ ಮನೆ ಬಳಿ ಸದರಿಯವರನ್ನು ವಶಕ್ಕೆ ಪಡೆದ ತುರುವೇಕೆರೆ ಪೊಲೀಸರು ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ.

ಬೆಂಗಳೂರಿನ ಆನೇಕಲ್ ತಾಲೂಕ್, ಜಿಗಣಿಯ ಹಗಲುಗಳ್ಳ ಉದಯ್ ಅಲಿಯಾಸ್ ಅಶೋಕ್ (30) ಎಂಬಾತ ಕಳ್ಳತನ ಮಾಡಿದ ಒಡವೆ ಗಳನ್ನೆಲ್ಲ ತನ್ನ ಪತ್ನಿಯ ಕಡೆಯಿಂದ ಅಟ್ಟಿಕ ಗೋಲ್ಡ್ ಕಂಪನಿಗೆ ಮಾರಾಟ ಮಾಡಿಸುತ್ತಿದ್ದ ನೆನ್ನ ಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಆಡಿಶನಲ್ ಎಸ್‌ಪಿಗಳಾದ ಮರಿಯಪ್ಪ, ಖಾದರ್, ನೇತೃತ್ವದ ತಂಡ ತುರುವೇಕೆರೆ ಸಿಪಿಐ ಲೋಹಿತ್ ಮತ್ತು ಸಿಬ್ಬಂದಿ ಬಾಬು ರವರನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸುತ್ತಿದ್ದಾರೆ ಎಂದು ಎಸ್ ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.