ಲೋಕಾಯುಕ್ತ ಬಲೆಗೆ ಸಿ.ಎಸ್.ಪುರ ಆರ್.ಐ.

ಲೋಕಾಯುಕ್ತ ಬಲೆಗೆ ಸಿ.ಎಸ್.ಪುರ ಆರ್.ಐ.

ತುಮಕೂರು- ಜಮೀನಿನ ದಾಖಲಾತಿ ಮಾಡಿಕೊಡುವ ಸಂಬಂಧ ರೆವಿನ್ಯೂ ಇನ್ಸ್ ಪೆಕ್ಟರ್ ರೈತರೊಬ್ಬರಿಂದ 10 ಸಾವಿರ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

ಗುಬ್ಬಿ ತಾಲ್ಲೂಕು ಸಿ.ಎಸ್.ಪುರ ಹೋಬಳಿ ಆರ್.ಐ. ನರಸಿಂಹಮೂರ್ತಿ ಎಂಬುವರೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಅಧಿಕಾರಿ.
ಸಿ.ಎಸ್. ಪುರ ನಾಡಕಚೇರಿಯಲ್ಲಿ ದಾಖಲಾತಿ ಮಾಡಿಕೊಡುವ ಸಲುವಾಗಿ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು, 10 ಸಾವಿರ ರೂ.ಗಳನ್ನು ರೈತರೊಬ್ಬರಿಂದ ಸ್ವೀರಿಸುವಾಗ ತುಮಕೂರು ಲೋಕಾಯುಕ್ತ ಎಸ್ಪಿ ವಲಿಬಾಷಾ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ್ದಾರೆ.

ಲೋಕಾಯುಕ್ತ ಬಲೆಗೆ ಬಿದ್ದಿರುವ ಆರ್.ಐ. ನರಸಿಂಹಮೂರ್ತಿ ಈ ಹಿಂದೆ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸುವಾಗಲೂ ಸಹ ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದರು ಎನ್ನಲಾಗಿದೆ.

ಇತ್ತೀಚೆಗಷ್ಟೆ ಸಿ.ಎಸ್.ಪುರ ಹೋಬಳಿಗೆ ಆರ್.ಐ. ಆಗಿ ವರ್ಗಾವಣೆಗೊಂಡಿದ್ದರು ಎಂದು ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತಿಳಿಯಬೇಕಿದೆ.