ತುಮಕೂರು : ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿ ಪೊಲೀಸ್ ಹತ್ಯಾಕಾಂಡದಲ್ಲಿ ಭಾಗಿಯಾಗಿ ತಲೆಮರಿಸಿಕೊಂಡಿದ್ದ ನಕ್ಸಲೀಯ ಕೊತ್ತಗೆರೆ ಶಂಕರ್ ನನ್ನು 19 ವರ್ಷಗಳ ನಂತರ ಬಂಧಿಸಲಾಗಿದೆ.
ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯಲ್ಲಿ ದಿನಾಂಕ 10.02.2005 ರಂದು ರಾತ್ರಿ 10:30ರ ಸಮಯದಲ್ಲಿ ನಕ್ಸಲೀಯರು ಪೊಲೀಸ್ ಕ್ಯಾಂಪ್ ಮೇಲೆ ಬಾಂಬ್ ಮತ್ತು ಬಂದೂಕುಗಳಿಂದ ದಾಳಿ ನಡೆಸಿ ಕರ್ತವ್ಯದಲ್ಲಿದ್ದ 7 ಮಂದಿ ಪೊಲೀಸರನ್ನು ಹತ್ಯೆ ಮಾಡಿದ್ದರು. ಈ ಸಂಬಂಧ ತಿರುಮಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದರಿ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ನಕ್ಸಲೀಯ ಕೊತ್ತಗೆರೆ ಶಂಕರ್ ನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.