ತುಮಕೂರು ಕಾರ್ಮಿಕ ಅಧಿಕಾರಿಯಾಗಿ ಮತ್ತೆ ತೇಜಾವತಿ

ತುಮಕೂರು ಕಾರ್ಮಿಕ ಅಧಿಕಾರಿಯಾಗಿ ಮತ್ತೆ ತೇಜಾವತಿ

ತುಮಕೂರು : ಇತ್ತೀಚೆಗಷ್ಟೇ ಬೆಂಗಳೂರಿಗೆ ವರ್ಗಾವಣೆ ಆಗಿದ್ದ ತುಮಕೂರಿನ ಕಾರ್ಮಿಕ ಅಧಿಕಾರಿ ತೇಜಾವತಿ ಅವರು ಮತ್ತೆ ತುಮಕೂರು ಕಾರ್ಮಿಕ ಅಧಿಕಾರಿಯಾಗಿ (ಸೆ. 15) ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ.

ಸಾರ್ವಜನಿಕ ಹಿತ ದೃಷ್ಟಿಯಿಂದ ಎರಡು ವರ್ಷ ಪೂರೈಸದ ತುಮಕೂರಿನ ಈ ಹಿಂದಿನ ಕಾರ್ಮಿಕ ಅಧಿಕಾರಿ ತೇಜಾವತಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು.

ನಿಯಮ ಉಲ್ಲಂಘಿಸಿ ವರ್ಗಾವಣೆ ಮಾಡಲಾಗಿದೆ ಎಂದು ತೇಜಾವತಿ ಅವರು ವರ್ಗಾವಣೆ ಆದೇಶಕ್ಕೆ ತಡೆ ಕೋರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.

ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗಲೇ ಸರ್ಕಾರ ಮತ್ತೆ ತೇಜಾವತಿ ಅವರನ್ನು ತುಮಕೂರು ಕಾರ್ಮಿಕ ಅಧಿಕಾರಿಯಾಗಿ ವರ್ಗಾವಣೆ ಮಾಡಿದೆ ಎಂಬ ಸುದ್ದಿ ಇದೆ.

ಸೆಪ್ಟಂಬರ್ 12ರಂದು ತುಮಕೂರು ಕಾರ್ಮಿಕ ಅಧಿಕಾರಿಯಾಗಿ ತೇಜಾವತಿ ಅವರು ಅಧಿಕಾರ ವಹಿಸಿಕೊಳ್ಳಲು ಮುಂದಾದರು, ಚಾಲನಾ ಪತ್ರ ದೊರೆಯದ ಕಾರಣ ಸೋಮವಾರ (ಸೆ. 15 ) ಚಾಲನಾ ಪತ್ರ ಪಡೆದು ತುಮಕೂರು ಕಾರ್ಮಿಕ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ.