ರಕ್ಷಿಸಲ್ಪಟ್ಟ ಗೋವುಗಳನ್ನೆ ಅದಲು-ಬದಲು ಮಾಡಿದ ಪೊಲೀಸರು

ರಕ್ಷಿಸಲ್ಪಟ್ಟ ಗೋವುಗಳನ್ನೆ ಅದಲು-ಬದಲು ಮಾಡಿದ ಪೊಲೀಸರು

ತುಮಕೂರು-  ಲೋಕಸಭಾ ಚುನಾವಣಾ ಕಾವು ಏರುತ್ತಿರುವಂತೆ ರಾಜಕಾರಣಿಗಳು ಚುನಾವಣೆಯತ್ತ ಗಮನಹರಿಸಿದ್ದರೆ ಪೊಲೀಸ್ ಇಲಾಖೆ ಚುನಾವಣಾ ಅಕ್ರಮ ತಡೆಯುವಲ್ಲಿ ಮುಂದಾಗಿದೆಯಾದರೂ ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರವಂತೂ ಕಡಿಮೆಯಾಗಿಲ್ಲ ಎಂಬುದಕ್ಕೆ ತಾಜಾ ಉದಾಹರಣೆಯಂತೆ ಕಳೆದ 8-10 ದಿನಗಳ ಹಿಂದೆ ತುಮಕೂರು ನಗರ ಉಪವಿಭಾಗ  ಠಾಣೆಯೊಂದರ ವ್ಯಾಪ್ತಿಯಲ್ಲಿ  ಕಸಾಯಿಖಾನೆಗೆ ಸಾಗಿಸುತ್ತಿದ್ದ  ಗೋವುಗಳನ್ನು ರಕ್ಷಣೆ ಮಾಡಿ ಸಂಬಂಧಪಟ್ಟ ಠಾಣೆಗೆ  ಒಪ್ಪಿಸಲಾಯಿತು.

ಅದರಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ರಕ್ಷಿಸಲ್ಪಟ್ಟ ಗೋವುಗಳನ್ನು ಗೋಶಾಲೆಗೆ ಬಿಡುವ ನಿಯಮದಂತೆಯೇ ಆಗಿದೆಯಾದರೂ ರಕ್ಷಿಸಲ್ಪಟ್ಟ ಗೋವುಗಳನ್ನು ಗೋಶಾಲೆಗೆ ಬಿಡುವ ಬದಲು ಬೇರೆ ಗೋವುಗಳನ್ನು ಗೋಶಾಲೆಗೆ ಬಿಟ್ಟಿರುವ ಪ್ರಕರಣ ನಡೆದಿದೆ.

ರಕ್ಷಿಸಲ್ಪಟ್ಟ ಗೋವುಗಳನ್ನೆ ಅದಲು-ಬದಲು ಮಾಡಿದ ಪೊಲೀಸರು
ಈ ವಿಚಾರ ಜಿಲ್ಲಾ ಎಸ್ಪಿ ಅವರಿಗೂ ತಿಳಿದು ಪ್ರಕರಣಕ್ಕೆ ಸಂಬಂಧಿಸಿದ ವರದಿ ನೀಡುವಂತೆ ಸಂಬಂಧಪಟ್ಟ ಠಾಣೆಯ ಸಿಪಿಐಗೆ ತಿಳಿಸಿದ್ದಾರೆ. ತನಿಖೆ ಕೈಗೊಂಡ ಇನ್ಸ್ ಪೆಕ್ಟರ್ ಗೋವುಗಳನ್ನು ಅದಲು-ಬದಲು ಮಾಡಿರುವುದು ಸತ್ಯವೆಂದು ಎಸ್ಪಿಗೆ ವರದಿ ನೀಡಿದ್ದರೂ ಇನ್ನೂ ಕಾನೂನು ಕ್ರಮ ಕೈಗೊಂಡಿಲ್ಲ. ಅಂದ ಮೇಲೆ ತಪ್ಪಿತಸ್ಥ ಅಧಿಕಾರಿಗಳ ರಕ್ಷಣೆ ನಡೆಯುತ್ತಿದೆ ಎಂಬ ಮಾತುಗಳು ಇಲಾಖೆ ವ್ಯಾಪ್ತಿಯಲ್ಲಿ ಕೇಳಿ ಬರುತ್ತಿದೆ.

ಈ ಪ್ರಕರಣ ನಿಜವೇ ಆಗಿದ್ದರೆ ತಪ್ಪಿತಸ್ಥ ಅಧಿಕಾರಿಗಳನ್ನು ರಕ್ಷಣೆ ಮಾಡದೆ ಅಂತಹವರ ವಿರುದ್ಧ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು  ಅಮಾನತ್ತು ಎಂಬ ಸಾಮಾನ್ಯ ಕ್ರಮದ ಬದಲು ನಿಯಮಾನುಸಾರ ಪ್ರಕರಣ ದಾಖಲಿಸಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಎಸ್ಪಿ ರವರು ಸ್ಪಷ್ಟನೆ ನೀಡುವುದು ಒಳ್ಳೆಯದು ಎಂಬುದು ಪತ್ರಿಕೆಯ ಆಶಯವಾಗಿದೆ.