ತುಮಕೂರು: ನಗರದ ಬೀದಿ ಬದಿ ವ್ಯಾಪಾರಿಗಳ ಬಗ್ಗೆ ಸಹಾನುಭೂತಿ ಗೌರವ ನಮಗೂ ಇದೆ. ಅವರ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಿ ಕೊಡಲಾಗುವುದು. ಪ್ರತಿಯೊಬ್ಬ ವ್ಯಾಪಾರಿಯು ಸರ್ಕಾರದ ನಿಯಮ ಪಾಲಿಸಲೇಬೇಕೆಂದು ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಶುಭ ಸ್ಪಷ್ಟವಾಗಿ ಹೇಳಿದರು.
ಬೀದಿಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಮತ್ತು ವ್ಯಾಪಾರಿಗಳ ಜೊತೆ ಸಮಸ್ಯೆ ಬಗ್ಗೆ ಚರ್ಚಿಸಿ ಮನವಿ ಪತ್ರ ಸ್ವೀಕರಿಸಿ ಮೇಲಿನಂತೆ ಹೇಳಿದರು, ಶೆಟ್ಟಿಹಳ್ಳಿ ರಸ್ತೆಯ ಎರಡು ಬದಿಗಳಲ್ಲೂ ವ್ಯಾಪಾರಿಗಳು ತಮ್ಮ ವ್ಯಾಪಾರ ಮುಂದುವರಿಸುತ್ತಿರುವುದರಿಂದ ಫುಟ್ಪಾತ್ ಮೇಲೆ ಓಡಾಡುವ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದೆ, ಈಗಾಗಲೇ ಹಲವು ಬಾರಿ ತಮಗೆ ಜಯನಗರ ವೆಂಡಿಂಗ್ ಜೋನ್ ಗೆ ತೆರಳಲು ಸೂಚಿಸಿದರು ಸಹ ತಾವು ಹೋಗಿಲ್ಲ, ಸದ್ಯದಲ್ಲೇ ಅಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುತ್ತೇವೆ ನಂತರ ತಾವೆಲ್ಲರೂ ಅಲ್ಲಿಗೆ ಹೋಗಿ ವ್ಯಾಪಾರ ವಹಿವಾಟು ಚೆನ್ನಾಗಿ ನಡೆಸಿ ಇದಕ್ಕೆ ಆ ಭಾಗದ ಸಾರ್ವಜನಿಕರ ಮತ್ತು ಪಾಲಿಕೆ ಅಧಿಕಾರಿಗಳ ಸಹಕಾರ ತಮಗೆ ದೊರೆಯಲಿದೆ.

ಅಕಸ್ಮಾತ್ ತಾವು ಅಲ್ಲಿಗೆ ಹೋಗದಿದ್ದರೆ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿ ಯಾವುದೇ ಅಪಘಾತಗಳು ನಡೆದರು ಗಾಯಗೊಂಡವರ ಮತ್ತು ಜಕಂವಾಹನಗಳ ಖರ್ಚು ವೆಚ್ಚ ತಾವೇ ಬರಿಸುವುದಾಗಿ ಅಗ್ರಿಮೆಂಟ್ ಮಾಡಿಕೊಡಿ ಎಂದು ಆಯುಕ್ತರು ಪಟ್ಟು ಹಿಡಿದರು. ಆಗ ಸಂಘದ ಪದಾಧಿಕಾರಿಗಳು ವ್ಯಾಪಾರಿಗಳು ಆಯುಕ್ತರ ಸಲಹೆಗೆ ಒಪ್ಪಿಗೆ ಸೂಚಿಸಿ ನಮಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಕಲ್ಪಿಸಿಕೊಡಿ ನಾವೆಲ್ಲ ವೆಂಡಿಂಗ್ ಜೋನ್ಗೆ ಹೋಗಿ ವ್ಯಾಪಾರ ನಡೆಸುತ್ತೇವೆ ಎಂದರು.
ಮೂಲಭೂತ ಸೌಕರ್ಯ ಕಲ್ಪಿಸಿ ಕೊಡುವವರೆಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಫುಟ್ಪಾತ್ ನಲ್ಲಿ ವ್ಯಾಪಾರ ಮುಂದುವರಿಸಲು ಅನುಮತಿ ನೀಡಿದ್ದಾರೆ. ಪ್ರತಿನಿತ್ಯ ತುಮಕೂರು ನಗರದ ಎರಡು ಅಥವಾ ಮೂರು ವಾರ್ಡ್ಗಳಲ್ಲಿ ತಾವು ಅಧಿಕಾರಿಗಳೊಂದಿಗೆ ಹಾಗೂ ಮಾಜಿ ಕಾರ್ಪೊರೇಟರ್ ಗಳೊಂದಿಗೆ ಓಡಾಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಿದ್ದೇನೆ. ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಯಾರೇ ಕರ್ತವ್ಯದಲ್ಲಿ ನಿರ್ಲಕ್ಷ ತೋರಿದರೆ ಅವರ ವಿರುದ್ಧ ಕ್ರಮ ಜಗದಿಸಲು ತಾವು ಹಿಂಜರಿಯುವುದಿಲ್ಲ ಎಂದು ಶುಭ ತಿಳಿಸಿದರು.
One attachment
