ತುಮಕೂರು: ಕಣ್ಣಿನ ಶಸ್ತ್ರ ಚಿಕಿತ್ಸೆಯ ಲೆನ್ಸ್ ಹಾಕಲು ೬೦೦೦ ರೂ ಲಂಚ ಪಡೆಯುವಾಗ ತುಮಕೂರು ಜಿಲ್ಲಾ ಆಸ್ಪತ್ರೆಯ ವೈದ್ಯೆ ಮತ್ತು ಹೊರಗುತ್ತಿಗೆ ನೌಕರ ತುಮಕೂರು ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.
ಜಿಲ್ಲಾ ಆಸ್ಪತ್ರೆಯ ಡಾ. ಸವಿತಾ ಮತ್ತು ಹೊರಗುತ್ತಿಗೆ ನೌಕರ ಮನೋಜ್ ಎಂಬುವರೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದವರು.
ತುಮಕೂರಿನ ಉಪ್ಪಾರಹಳ್ಳಿ ವಾಸಿ ಅವಿನಾಶ್ ಎಂಬುವರು ತಮ್ಮ ತಾಯಿ ಮಂಗಳಮ್ಮ ಎಂಬುವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಕಣ್ಣನ್ನು ತೋರಿಸಿದರು. ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಲೆನ್ಸ್ ಹಾಕಬೇಕು ಆರು ಸಾವಿರ ರೂ ಕೊಟ್ಟರೆ ಆಪರೇಷನ್ ಮಾಡಿಕೊಡುವುದಾಗಿ ಹೇಳಿದರಂತೆ. ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲವೂ ಉಚಿತ ಹಣ ಏಕೆ ನೀಡಬೇಕು ಎಂದು ಅವಿನಾಶ್ ಕೇಳಿದಾಗ ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಉಚಿತವಾಗಿ ಶಾಸ್ತ್ರ ಚಿಕಿತ್ಸೆ ಮಾಡುತ್ತಾರೆ ಬೇಕಾದರೆ ಬರೆದುಕೊಡುತ್ತೇನೆ ಅಲ್ಲಿಗೆ ಹೋಗಿ ಮಾಡಿಸಿಕೊಂಡು ಬನ್ನಿ ಎಂದು ಹೇಳಿದರೆ ನ್ನಲಾಗಿದೆ.
6000 ರೂ ಲಂಚ ಕೊಡಲು ಮನಸು ಒಪ್ಪದ ಅವಿನಾಶ್, ತುಮಕೂರು ಲೋಕಾಯುಕ್ತ ಪೊಲೀಸರ ಮೊರೆ ಹೋದರು. ಇಂದು ಮಧ್ಯಾಹ್ನ ಲಂಚದ ಹಣ ಪಡೆಯಬೇಕಾದರೆ ಹೊರಗುತ್ತಿಗೆ ನೌಕರ ಮನೋಜ್ ಮತ್ತು ವೈದ್ಯರಾದ ಸವಿತಾ ರವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಎಸ್ ಪಿ ಲಕ್ಷ್ಮಿ ನಾರಾಯಣ್ ನೇತೃತ್ವದಲ್ಲಿ ಡಿವೈಎಸ್ಪಿಗಳಾದ ಸಂತೋಷ್, ಮಂಜುನಾಥ್, ಇನ್ಸ್ಪೆಕ್ಟರ್ ಗಳಾದ ರಾಜು, ಮಹಮದ್ ಸಲೀಂ ಮತ್ತು ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.
