ತುಮಕೂರು: ಜಿಲ್ಲೆಯ ಶಿರಾ ತಾಲ್ಲೂಕ್ ಗಾಣದ ಹುಣಿಸೆ ಗ್ರಾಮದ ನಕಲಿ ವೃದ್ಧಾಶ್ರಮ(ಕತ್ತಲೆ ಕೋಣೆಯಲ್ಲಿದ್ದ)ದಲ್ಲಿ ಇದ್ದ 64 ಮಂದಿಯನ್ನು ರಕ್ಷಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇದುವರೆಗೂ ಸಮರ್ಪಕ ಮಾಹಿತಿ ನೀಡದೆ ಇರುವುದು, ಮಾಹಿತಿ ತಿಳಿಯಲು ದೂರವಾಣಿ ಕರೆ ಮಾಡಿದರೆ ಕರೆ ಸ್ವೀಕರಿಸದೆ ಇರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಡುತ್ತಿದೆ.
ಬೇದಸ್ತ ನಿರಾಶ್ರಿತರ ವೃದ್ಧಾಶ್ರಮಕ್ಕೆ ಭೇಟಿ ನೀಡಿದ ಅಧಿಕಾರಿಗಳಿಗೆ ಕಟ್ಟಡದಲ್ಲಿ ತಿಂಗಳಾನುಗಟ್ಟಲೆ ಮೂಲಭೂತ ಸೌಕರ್ಯ ಇಲ್ಲದೆ ಸಂಸ್ಥೆಯವರು ಕೊಟ್ಟ ಶಿಕ್ಷೆ ಅನುಭವಿಸಿಕೊಂಡು ಇದ್ದ ನೊಂದ ಮಂದಿಯ ಎಲ್ಲಾ ಆಹ್ವಲನ್ನು ಅಧಿಕಾರಿಗಳು ಕಿವಿಆರೆ ಕೇಳಿ ತತ್ತಕ್ಷಣಕ್ಕೆ ನಿರಾಶ್ರಿತರ ಕೇಂದ್ರಕ್ಕೆ ಸಾರಿಗೆ ಸಮಸ್ತ ಬಸ್ನಲ್ಲಿ ತಂದು ಬಿಟ್ಟು ಎಲ್ಲ ವ್ಯವಸ್ಥೆ ಕಲ್ಪಿಸಿಕೊಟ್ಟು ಸಂಬಂಧ ಪಟ್ಟವರ ಮನೆ ಮತ್ತು ಪೋಷಕರ ವಿಳಾಸ ಪತ್ತೆ ಹಚ್ಚಿ ಅವರ ಜೊತೆಯಲ್ಲಿ ಕಳುಹಿಸಿ ಕೊಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಪೊಲೀಸರ ತನಿಖೆ ಮತ್ತು ಅಧಿಕಾರಿಗಳ ಮಾಹಿತಿಯಿಂದಷ್ಟೇ ಹೆಚ್ಚಿನ ವಿವರ ತಿಳಿಯಬೇಕಿದೆ ಎಂದು ಸುದ್ದಿ ಪ್ರಕಟಿಸಲಾಗಿತ್ತು. ಆದರೆ ಇಂದು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ, ಕೋರ ಬಳಿ ಇರುವ ನಿರಾಶ್ರಿತರ ಕೇಂದ್ರದ ಅಧಿಕಾರಿಗಳ ಮಾಹಿತಿ ಪ್ರಕಾರ ಇಬ್ಬರು ವ್ಯಕ್ತಿಗಳು ಸತ್ತು ಹೋಗಿದ್ದಾರೆ. 17 ಮಂದಿಯನ್ನು ಅವರ ಮನೆಗಳಿಗೆ ಕಳುಹಿಸಿಕೊಡಲಾಗಿದೆ. ಉಳಿಕೆ 45 ಮಂದಿ ನಿರಾಶ್ರಿತರ ಕೇಂದ್ರದಲ್ಲೇ ಇದ್ದಾರೆ ಎನ್ನಲಾಗಿದೆ. ಪೊಲೀಸ್ ಠಾಣೆ ಗಳಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿ ಈವರೆಗೂ ತಿಳಿದು ಬಂದಿಲ್ಲ.
ಮೂರು ಮಂದಿ ಮಹಿಳೆಯರು 6 ಮಂದಿ ಪುರುಷರ ವಿಳಾಸ ಪತ್ತೆ ಹಚ್ಚಿ ಕರೆದುಕೊಂಡು ಹೋಗಿ ಅವರ ಮನೆಗಳಿಗೆ ಬಿಡಲಾಗಿದೆ. ಓರ್ವ ಮಹಿಳೆ ಸೇರಿದಂತೆ ಎಂಟು ಮಂದಿಯನ್ನು ಮನೆಯವರೆ ತಾಲೂಕ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ ವಿವರಣೆ ಕೊಟ್ಟು ಬಿಡಿಸಿಕೊಂಡು ತಮ್ಮ ಮನೆಗಳಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಉಳಿದ 45 ಮಂದಿಯ ಸ್ಥಿತಿಗತಿ ಏನು ಎಂಬ ಬಗ್ಗೆ ತಿಳಿದುಕೊಳ್ಳಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಆಗುತ್ತಿಲ್ಲವೇನೋ ಆ ಭಗವಂತನೇ ಉತ್ತರಿಸಬೇಕು. ರಾಜಕೀಯ ಒತ್ತಡಗಳಿಗೆ ಮಣಿದು ಈ ಪ್ರಕರಣ ಅಲ್ಲಿಗೆ ಕೈ ಬಿಟ್ಟಿರಬಹುದು ಎಂಬ ಸಂಶಯ ಶಿರಾ ತಾಲ್ಲೂಕಿನ ಜನರಲ್ಲಿ ಮೂಡಿದೆ!!
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಡಾ. ಎಸ್. ಸಿದ್ದ ರಾಮಣ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಅಂಬಿಕಾ ರವರು ನಿಷ್ಠೆ, ಪ್ರಾಮಾಣಿಕತೆಗೆ ಹೆಸರಾದ ಅಧಿಕಾರಿಗಳು ಆದರೆ ಈ ಪ್ರಕರಣದಲ್ಲಿ ಏಕೆ ಸುಮ್ಮನಾಗಿದ್ದಾರೋ ಗೊತ್ತಿಲ್ಲ ಅದಕ್ಕೆ ಆ ಅಧಿಕಾರಿಗಳೇ ಉತ್ತರಿಸಬೇಕು.
ಪೊಲೀಸರ ತನಕೆಯಿಂದಷ್ಟೇ ಹೆಚ್ಚಿನ ಮಾಹಿತಿ ಬರಬೇಕಿದೆ. ಇಂತಹ ನಿರಾಶ್ರಿತರ ಕೇಂದ್ರಗಳು ತುಮಕೂರು ಜಿಲ್ಲೆಯಲ್ಲಿ ಹಲವೆಡೆ ಇಲಾಖೆಗಳ ಅನುಮತಿ ಪಡೆಯದೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ ಇನ್ನು ಮುಂದಾದರು ಸಂಬಂಧಪಟ್ಟ ಅಧಿಕಾರಿಗಳು ವೃದ್ಧಾಶ್ರಮಗಳ ಮೇಲೆ ದಿಡೀರ್ ದಾಳಿ ನಡೆಸಿ ಅಲ್ಲಿನ ಮೂಲಭೂತ ಸೌಕರ್ಯ ಇನ್ನಿತರ ವ್ಯವಸ್ಥೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿದ್ದರೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲು ಹಿಂಜರಿಯ ಬಾರದೆಂದು ಸಾರ್ವಜನಿಕರ ಆಗ್ರಹವಾಗಿದೆ.
: ಇಲ್ಲಿನ ಸಾಧನ ಮಹಿಳಾ ಸಂಘದವರು ನೀಡಿದ ದೂರಿನ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಶಿರಾ ತಹಶೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದು ದಿಢೀರ್ ದಾಳಿ ನಡೆಸಿ 64 ಮಂದಿಯನ್ನು ರಕ್ಷಿಸಿದ್ದು ನಿಜಕ್ಕೂ ಒಳ್ಳೆಯ ಕೆಲಸ. ಆದರೆ ಬಾಕಿ ಇರುವ 45 ಮಂದಿಯ ಪರಿಸ್ಥಿತಿ ಏನು? ಎಂದು ತಿಳಿಯದೆ ಇರುವುದು ವಿಷಾಧಕರ ಸಂಗತಿ. ಇನ್ನು ಮುಂದಾದರೂ ಅಧಿಕಾರಿಗಳು ಅತ್ತ ಕಡೆ ಗಮನಹರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ಬಾಕಿ ಇರುವ 45 ಮಂದಿಯ ಮನೆಯವರನ್ನು ಪತ್ತೆ ಹಚ್ಚಿ ಅವರ ಮನೆಗಳಿಗೆ ಕಳುಹಿಸಿ ಕೊಡುವರೇ ಕಾದು ನೋಡೋಣ ಅಲ್ಲವೇ!!
