ಶಿರಾ: ಇಲ್ಲಿನ ನಗರಸಭೆಗೆ ಇಂದು ಸಹ ತುಮಕೂರು ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಕಡತಗಳ ತಪಾಸಣೆ ಮುಂದುವರಿಸಿದ್ದಾರೆ.
ಕಂದಾಯ, ಆಡಳಿತ, ತಾಂತ್ರಿಕ ವಿಭಾಗಗಳ ಕಡತಿಗಳ ಪರಿಶೀಲನಾ ಕಾರ್ಯ ಈ ದಿನವೂ ಮುಂದುವರೆದಿದೆ. ಡಿವೈಎಸ್ಪಿ ಗಳಾದ ಸಂತೋಷ್. ಮಂಜುನಾಥ್. ಇನ್ಸ್ಪೆಕ್ಟರ್ ಗಳಾದ ರಾಘವೇಂದ್ರ. ನಿರ್ಮಲ. ರಾಜು ಶಾಂತಿನಾಥ್ ಮತ್ತು ಸಿಬ್ಬಂದಿ ನಿನ್ನೆ ನಡೆದ ದಾಳಿಯಲ್ಲಿ ಭಾಗವಹಿಸಿದ್ದರು.
ಕಡತಗಳ ವಿಲೇವಾರಿಯಲ್ಲಿ ವಿಳಂಬ ಹಾಗೂ ಲಂಚದ ಬೇಡಿಕೆ ಹೆಚ್ಚಿದೆ ಎಂದು ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ದಾಳಿ ನಡೆದಿದ್ದು ಈ ದಿನವೂ ಕಡತಗಳ ತನಿಖಾ ಕಾರ್ಯ ಸಾಗಿದೆ. ನಗರಸಭಾ ಕಮಿಷನರ್ ಹಾಗೂ ಸಿಬ್ಬಂದಿ ವರ್ಗ ಲೋಕಾಯುಕ್ತ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರೆ ಪ್ರಕರಣ ದಿಂದ ಮುಕ್ತರಾಗುತ್ತಾರೆ ಇಲ್ಲದಿದ್ದರೆ ತಪ್ಪಿಸ್ತರಿಗೆ ತಕ್ಕ ಶಾಸ್ತಿ ಖಚಿತ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
