ಕ್ಯಾತ್ಸಂದ್ರ ಠಾಣೆಯ ಇಬ್ಬರು ಪಿಎಸ್ಐ 3 ಸಿಬ್ಬಂದಿಗೆ ನೋಟಿಸ್, ಓರ್ವ ಪೇದೆ ಸಸ್ಪೆಂಡ್

ತುಮಕೂರು: ಇಲ್ಲಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಇಬ್ಬರು ಪಿ ಎಸ್ ಐ, ಮೂರು ಮಂದಿ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿ ಓರ್ವ ಪೊಲೀಸ್ ಪೇದೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಸ್ಪೆಂಡ್ ಮಾಡಿದ್ದಾರೆ.

ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂಜಾಡುತ್ತಿದ್ದ ತಂಡದ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದ ತಂಡ ದಾಳಿ ನಡೆಸಿ 15 ಲಕ್ಷಕ್ಕೂ ಅಧಿಕ ಹಣ, 30 ವಾಹನ ವಶ ಪಡಿಸಿಕೊಂಡು 32 ಮಂದಿ ಜೂಜು ಕೋರರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು.

ಇಂದು ಎಸ್ ಬಿ ಕಾನ್ಸ್ಟೇಬಲ್ ಒಬ್ಬರನ್ನು ಸಸ್ಪೆಂಡ್ ಮಾಡಿ ಇಬ್ಬರೂ ಪಿಎಸ್ಐ 3 ಸಿಬ್ಬಂದಿಗಳಿಗೆ ಕಾನೂನು ರಿತ್ಯಾ ಸಮಜಾಯಿಶಿ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸುವೆ.