ತುಮಕೂರು: ಇಲ್ಲಿನ ಶ್ರೀನಗರ ವಾಸಿ ಚಂದ್ರಶೇಖರ್ ಎಂಬುವರ ಮನೆ ಬೀಗ ಮುರಿದು ಕಳ್ಳರು ಒಳ ನುಗ್ಗಿ ಸಹಸ್ರಾರು ರೂ ಬೆಲೆಯ ಚಿನ್ನ-ಬೆಳ್ಳಿ ಆಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಕಳೆದ ರಾತ್ರಿ ನಡೆದಿದೆ.
ಮನೆಯವರು ಬೆಂಗಳೂರಿಗೆ ತೆರಳಿ ಇಂದು ಬೆಳಗ್ಗೆ ಬಂದು ನೋಡಿದಾಗ ಮನೆಯ ಸೈಡ್ ನಲ್ಲಿರುವ ಬಾಗಿಲಿನ ಬೀಗ ಮುರಿಯಲಾಗಿತ್ತು.
ಒಳಗಡೆ ಹೋಗಿ ನೋಡಿದಾಗ ಕಳ್ಳತನ ನಡೆದಿತ್ತು. ಚಿನ್ನ ಬೆಳ್ಳಿ ಆಭರಣಗಳು ಕಳ್ಳತನ ವಾಗಿವೆ ಎಂದು ಹೇಳಲಾಗುತ್ತಿದೆ. ಚಂದ್ರಶೇಖರ್ ರವರ ಪತ್ನಿ ಬಂದು ನೋಡುವವರೆಗೂ ನಿಖರ ಮಾಹಿತಿ ತಿಳಿದು ಬರುವುದಿಲ್ಲ ದೂರವಾಣಿ ಮೂಲಕ ಕೇಳಿದಾಗ ಚಿನ್ನದ ಆಭರಣಗಳು ಮಹಿಳೆ ಇಟ್ಟ ಕಡೆಯಲ್ಲಿಯೇ ಇವೆ ಎಂದು ಹೇಳಲಾಗಿದೆ ಸಾವಿರಾರು ರೂ ಮೌಲ್ಯದ ಬೆಳ್ಳಿ ಆಭರಣ ಕಳ್ಳತನವಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.
ಸುದ್ದಿ ತಿಳಿದ ಕೂಡಲೇ ಕ್ಯಾತ್ಸಂದ್ರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
