ಅಂತರಸಹಳ್ಳಿ ಕ್ಯೆಗಾರಿಕಾ ಪ್ರದೇಶಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ

ಅಂತರಸಹಳ್ಳಿ ಕ್ಯೆಗಾರಿಕಾ ಪ್ರದೇಶಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ

ತುಮಕೂರು : ನಗರದ ಹೊರವಲಯದ ಅಂತರಸಹಳ್ಳಿ ಕ್ಯೆಗಾರಿಕಾ ವಸಾಹತು ಕಾರ್ಖಾನೆಯೊಂದರಿಂದ ಕಲುಷಿತ ನೀರನ್ನು ರಾಜ ಕಾಲುವೆಗೆ ಹೊರಬೀಡುತ್ತಿರುವ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ರವರು ಸೋಮವಾರ ಮಧ್ಯಾಹ್ನ ನಗರದ ಹೊರವಲಯದ ಅಂತರಸಹಳ್ಳಿ ಕ್ಯೆಗಾರಿಕಾ ವಸಾಹತು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕ್ಯೆಗಾರಿಕೆಗಳು ಮಾಲಿನಯುಕ್ತ ತ್ಯಾಜ್ಯಗಳನ್ನು ಕಾಲುವೆಗಳಿಗೆ ಬೀಡಬಾರದು, ಈ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಸದರಿ ಪ್ರದೇಶವನ್ನು ಸಮಗ್ರವಾಗಿ ಪರಿಶೀಲಿಸಿ, ತ್ವರಿತ ವರದಿ ಸಲ್ಲಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಅಂತರಸಹಳ್ಳಿ ಕ್ಯೆಗಾರಿಕಾ ವಸಾಹತು ಪ್ರದೇಶದ ವ್ಯಾಪ್ತಿಯು ರಾಜ್ಯ ಸಣ್ಣ ಕ್ಯೆಗಾರಿಕಾ ಅಭಿವೃದ್ದಿ ನಿಗಮದ ವ್ಯಾಪ್ತಿಗೆ ಸೇರಿರುವದರಿಂದ, ರಾಜ್ಯ ಸಣ್ಣ ಕ್ಯೆಗಾರಿಕಾ ಅಭಿವೃದ್ದಿ ನಿಗಮದ ಸಹಾಯಕ ವ್ಯವಸ್ಥಾಪಕರಿಗೆ ಸ್ಥಳದಲೇ ದೂರವಾಣಿ ಮುಖೇನ ಮಾತನಾಡಿ, ಅಂತರಸಹಳ್ಳಿ ಕ್ಯೆಗಾರಿಕಾ ಪ್ರದೇಶದ ಕಾಲುವೆಗಳಲ್ಲಿ ಇರುವಂತಹ ತ್ಯಾಜ್ಯಗಳ ಪರಿಶೀಲನೆ ಮತ್ತು ವಿಲೇವಾರಿಗೆ ಶೀಘ್ರ ಕ್ರಮಕ್ಯೆಗೊಳ್ಳುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕ್ಯೆಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಡಿ.ಕೆ.ಲಿಂಗರಾಜು, ಕೆಐಎಡಿಬಿ ಅಧಿಕಾರಿಗಳು ಸೇರಿದ್ದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.