ತುಮಕೂರು: ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದ ನಾಲ್ಕು ಮಂದಿಯನ್ನು ಕ್ಯಾತ್ಸಂದ್ರ ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಅಡಿಷನಲ್ ಎಸ್ಪಿಗಳಾದ ಪುರುಷೋತ್ತಮ್, ಗೋಪಾಲ್ ಡಿವೈಎಸ್ಪಿ ಚಂದ್ರಶೇಖರ್ ಮಾರ್ಗದರ್ಶದಲ್ಲಿ ಕ್ಯಾತ್ಸಂದ್ರ ಸಿಪಿಐ ರಾಘವೇಂದ್ರ ಪಿಎಸ್ಸೈ ಪ್ರಸನ್ನ ಎಸ್ಸೈ ಮೋಹನ್ ಮತ್ತು ಸಿಬ್ಬಂದಿ ಸೈಮನ್,
ರಮೇಶ್ ಮತ್ತಿತರರು ಕೋಲೆ ಆರೋಪಿಗಳಾದ ಚೇತನ್ ಅಲಿಯಾಸ್ ಗೂಳಿ ಬೆಳಗುಂಬ ವಾಸಿ, ದೇವರಾಯಪಟ್ಟಣ ವಾಸಿ ಕುಮಾರ್, ಇನ್ನಿಬ್ಬರು ಮೈಸೂರು ವಾಸಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಇಡೀ ಪ್ರಕರಣ ಬಯಲಾಗಿದೆ.
ಬೆಳಗುಬ ನಿವಾಸಿ ಮಾಜಿ ರೌಡಿ ಶೀಟರ್ ಮಲ್ಲ ಅಲಿಯಾಸ್ ವೀರಣ್ಣ (೩೮) ಎಂಬಾತನನ್ನು ೪ ಮಂದಿ, ಮಹಿಳೆಯ ವಿಚಾರಕ್ಕೆ ಸಂಬಂಧಿಸಿದಂತೆ ಸಿಟ್ಟಿಗೆದ್ದು ಮಾರಕಾಸ್ತ್ರಗಳಿಂದ ಟೀ ಅಂಗಡಿ ಬಳಿ ಅಟ್ಯಾಕ್ ಮಾಡಿ ಕೊಲೆಗೈದು ಪರಾರಿಯಾಗಿದ್ದರು. ಈ ಸಂಬಂಧ ಕ್ಯಾತ್ಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿ ನಾಲ್ಕು ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಹಚ್ಚಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿಶೇಷ ತಂಡವನ್ನು ರಚಿಸಿದ್ದರು. ಆರೋಪಿಗಳ ವಿಚಾರಣೆಯಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳು ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಂಬಲಾರ್ಹ ಮೂಲಗಳಿಂದ ತಿಳಿದು ಬಂದಿದು.
