APMC ಕಾರ್ಯದರ್ಶಿ ಅವರ ನಕಲಿ ಸಹಿ : ಕಾರ್ಮಿಕ ಇಲಾಖೆಯಿಂದ ಸುಮಾರು 2 ಲಕ್ಷ ಗುಳುಂ

ತುಮಕೂರು ; ತುಮಕೂರು ಎಪಿಎಂಸಿ ಕಾರ್ಯದರ್ಶಿ ಅವರ ಸಹಿಯನ್ನು ನಕಲಿ ಮಾಡಿ ಸುಮಾರು 2 ಲಕ್ಷ ಗುಳುಂ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಕಾರ್ಮಿಕ ಇಲಾಖೆಯಿಂದ ನೀಡಲಾಗುವ ಕಾರ್ಮಿಕ ಕಿಟ್ಟುಗಳನ್ನು ಶೇಖರಣೆ ಮಾಡಲು ಸುಮಾರು ನಾಲ್ಕೈದು ತಿಂಗಳಿಂದ ಎಪಿಎಂಸಿಯಲ್ಲಿರುವ ಒಂದು ಗೋಡೌನ್ ನಲ್ಲಿ ಕಿಟ್ಟುಗಳನ್ನು ಇಡಲಾಗಿದೆ ಎನ್ನಲಾಗಿದೆ.

ಆ ಗೋಡೌನ್ ಬಾಡಿಗೆಗಾಗಿ ಬಂದಂತಹ ಸುಮಾರು 2 ಲಕ್ಷ ಹಣವನ್ನು ಎಪಿಎಂಸಿ ಕಾರ್ಯದರ್ಶಿ ಅವರು ಪಡೆದ ರೀತಿಯಲ್ಲಿ ಅವರ ಸಹಿಯನ್ನು ನಕಲಿ ಮಾಡಿ ಎರಡು ಲಕ್ಷ ಹಣವನ್ನು ಕಾರ್ಮಿಕ ಇಲಾಖೆಯ ಅಧಿಕಾರಿಯೊಬ್ಬರು ಹಾಗೂ ಮಧ್ಯವರ್ತಿ ಒಬ್ಬ ಸೇರಿ ಗುಳುಂ ಮಾಡಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

ಸರ್ಕಾರದಿಂದ ಬಂದಿರುವಂತಹ ಕಾರ್ಮಿಕ ಕಿಟ್ಟುಗಳನ್ನು ಶೇಖರಣೆ ಮಾಡಲು ಎಪಿಎಂಸಿಯಲ್ಲಿ ಇರುವ ಗೋಡೌನ್ ನನ್ನು ಎಪಿಎಂಸಿ ಕಾರ್ಯದರ್ಶಿ ರವರು ಅಧಿಕೃತವಾಗಿ ಕಾರ್ಮಿಕ ಇಲಾಖೆಗೆ ಬಾಡಿಗೆಗೆ ನೀಡಿಲ್ಲವಂತೆ, ಆದ್ದರಿಂದ ಬಾಡಿಗೆಗಾಗಿ ಬಂದಂತಹ ಪೂರ್ತಿ ಹಣವನ್ನು ಎಪಿಎಂಸಿ ಕಾರ್ಯದರ್ಶಿ ಅವರಿಗೆ ಏಕೆ ಕೊಡಬೇಕು ಅಲ್ಪ-ಸ್ವಲ್ಪ ಹಣ ಕೊಟ್ಟು ಕೈ ತೊಳೆದುಕೊಳ್ಳೋಣ ಎಂದು ಸಂಚುರೂಪಿಸಿ ಎಪಿಎಂಸಿ ಕಾರ್ಯದರ್ಶಿ ಅವರ ನಕಲಿ ಸಹಿ ಮಾಡಿ ಬಾಡಿಗೆಗಾಗಿ ಬಂದಂತಹ ಹಣವನ್ನು ಗುಳುಂ ಮಾಡಲಾಗಿದೆ ಎನ್ನಲಾಗುತ್ತಿದೆ.

ಅಂತೆಯೇ ಇನ್ನೊಂದು ಖಾಸಗಿ ಗೋಡೌನ್ ನಲ್ಲಿ ಕಾರ್ಮಿಕ ಕಿಟ್ಟುಗಳನ್ನು ಇಟ್ಟಿದ್ದು ಆ ಗೋಡೌನ್ ಬಂದಂತಹ ಬಾಡಿಗೆ ಹಣವನ್ನು ಸಹ ಗುಳುಂ ಮಾಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ . ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಪ್ರಜ್ಞಾವಂತ ನಾಗರೀಕರ ಆಶಯವಾಗಿದೆ.