ತುಮಕೂರು : ತುಮಕೂರು ಮಹಾನಗರ ಪಾಲಿಕೆಯ ಸುಪ್ರಿಯ ಬಣಕರ್ ಡಿಸಿ ಅಡ್ಮಿನ್ ಮಹಾನಗರ ಪಾಲಿಕೆ ಸ್ಪೆಷಲ್ ಅಸಿಸ್ಟೆಂಟ್ ಕಮಿಷನರ್ ಕೋರ್ಟ್, ತುಮಕೂರು ಅವರ ಅಧೀನದಲ್ಲಿ ಕೆಲಸ ಮಾಡುವ ವೀಣಾ FDA ಹಾಗೂ ಟೈಪಿಸ್ಟ್ ಹೊರಗುತ್ತಿಗೆ ನೌಕರರಾದ ಉಮೇಶ್ 50 ಸಾವಿರ ಲಂಚವನ್ನು ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದಿರುತ್ತಾರೆ.
ಸುಪ್ರಿಯಾ ಬಣಕಾರ್ ಅವರ ಹೆಸರನ್ನು ಹೇಳಿ ಹಣವನ್ನು ಪಡೆದಿರುತ್ತಾರೆ ಅವರ ಪಾತ್ರ ಏನು ಎಂದು ತನಿಖೆಯಲ್ಲಿ
ತಿಳಿಯಬೇಕಾಗಿರುತ್ತದೆ.
ಕೋರ ಹೋಬಳಿ, ಕಲ್ಲುಸದ್ದಕುಂಟೆ ಗ್ರಾಮದ ಜಮೀನಿನ ವಿವಾದವಿದ್ದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುತ್ತದೆ, ಅಪೀಲು ಹೋಗಿರುವವರು ನಿಮ್ಮ ಪರವಾಗಿ ಮಾಡಿಕೊಡುತ್ತೇವೆ ಎಂದು ಲಂಚ ಪಡೆಯುವ ಸಮಯದಲ್ಲಿ ಲೋಕಾಯುಕ್ತ ಪೊಲೀಸರ ಬಲಗೆ ಬಿದ್ದಿರುತ್ತಾರೆ.
ಲೋಕಾಯುಕ್ತ ಎಸ್ ಪಿ ಮಲ್ಲೇಶ್, ಡಿವೈಎಸ್ಪಿ ಗಳಾದ ಮಂಜುನಾಥ್ ಗೌಡ, ಸಂತೋಷ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ರಾಘವೇಂದ್ರ, ರಾಜು, ನಿರ್ಮಲ, ಸುನಿಲ್ ಕುಮಾರ್ ಮತ್ತು ಸಿಬ್ಬಂದಿ ವರ್ಗ ಸದರಿ ದಾಳಿಯಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.
