ತುಮಕೂರು: ಪಟಾಕಿ ಅಂಗಡಿಗೆ ಲೈಸನ್ಸ್ ಕೊಡಿಸುವ ಸಲುವಾಗಿ ಅರ್ಜಿ ಮೂ ಮಾಡಲು ವ್ಯಕ್ತಿ ಒಬ್ಬರಿಂದ 2000 ಲಂಚ ಪಡೆಯುವಾಗ ಡಿಸಿ ಕಚೇರಿಯ ಓ ಎ ತುಮಕೂರು ಲೋಕಾ ಪೊಲೀಸರು ಬೀಸಿದ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಇಲ್ಲಿನ ಡಿಸಿ ಕಚೇರಿಯ ಒಎ ಮುರಳಿ ಎಂಬುವರೇ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿರುವವರು.
ತುಮಕೂರು ಲೋಕಾಯುಕ್ತ ಎಸ್ ಪಿ ಪಿ. ಮಲ್ಲೇಶ್, ಡಿ ವೈ ಎಸ್ ಪಿ ಗಳಾದ ಸಂತೋಷ್, ಮಂಜುನಾಥ್ ಗೌಡ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ಶಾಂತಿನಾಥ್. ನಿರ್ಮಲ, ರಾಘವೇಂದ್ರ ಮತ್ತು ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.
