ತುಮಕೂರು: ಜಿಲ್ಲಾ ಕಾರ್ಮಿಕ ಇಲಾಖೆಯ ಇನ್ಸ್ಪೆಕ್ಟರ್ ಗಳ ನಿರ್ಲಕ್ಷ್ಯದಿಂದಾಗಿ ಬಾಲಕರ ಮತ್ತು ಬಾಲಕಿಯರ ಬಾಲ ಮಂದಿರದ ಸಿಬ್ಬಂದಿ ಪೀಕಲಾಟಕ್ಕೆ ಒಳಗಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಹೋಟೆಲ್ ಇನ್ನಿತರ ಯಾವುದೇ ಸ್ಥಳದಲ್ಲಿ ದಾಳಿ ಮಾಡಿ ಕೆಲಸ ಮಾಡುತ್ತಿರುವ ಮಕ್ಕಳನ್ನು ತಮ್ಮ ವಶಕ್ಕೆ ಪಡೆದ ಮೇಲೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವರುಗಳ ಮೆಡಿಕಲ್ ಟೆಸ್ಟ್ ಮಾಡಿಸಿ ನಂತರ ಬಾಲಕರ ಅಥವಾ ಹೆಣ್ಣು ಮಕ್ಕಳಾದರೆ ಬಾಲಕಿಯರ ಮಂದಿರಕ್ಕೆ ಕರೆದುಕೊಂಡು ಬಂದು ಕಾರ್ಮಿಕ ಇಲಾಖೆ ಇನ್ಸ್ಪೆಕ್ಟರ್ ಬಿಡಬೇಕಾಗುತ್ತದೆ.
ಆದರೆ ಇತ್ತೀಚೆಗೆ ಹಲವು ಮಕ್ಕಳನ್ನು ಕರೆ ತಂದು ಬಿಟ್ಟು ಬಾಲಕರ ಬಾಲ ಮಂದಿರದ ಸಿಬ್ಬಂದಿಯ ಮೇಲೆ ಸಿಟ್ಟಾಗಿ ಹೋಗಿದ್ದಾರೆಂದು ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.
ಕಾನೂನು ಪ್ರಕಾರ ಯಾವುದೇ ಹೋಟೆಲ್ ಇನ್ನಿತರ ಸ್ಥಳಗಳಲ್ಲಿ ಕಾರ್ಮಿಕ ಇಲಾಖೆ ಇನ್ಸ್ಪೆಕ್ಟರ್ ದಾಳಿ ಮಾಡಿದ ಮೇಲೆ ವಶಕ್ಕೆ ಪಡೆದು ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಿ ದಾಖಲೆ ಸಮೇತ ತಂದು ಸಂಬಂಧಪಟ್ಟ ಇಲಾಕ ಅಧಿಕಾರಿಗಳವಶಕ್ಕೆ ನೀಡುವುದು ಅವರ ಕರ್ತವ್ಯ. ಆದರೆ ತುಮಕೂರಿನಲ್ಲಿ ನಡೆಯುತ್ತಿರುವುದೇ ಬೇರೆ?
ನಮಗೆ ಏಕೆ ಮೆಡಿಕಲ್ ಟೆಸ್ಟ್ ಉಸಾಬರಿ!! ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಬಾಲ ಮಂದಿರಕ್ಕೆ ತೆರಳಿ ಅಲ್ಲಿನ ಸಿಬ್ಬಂದಿಗಳನ್ನು ಬಾಯಿಗೆ ಬಂದಂತೆ ಮಾತನಾಡಿ ಬಿಟ್ಟು ಹೋಗುವ ಪ್ರವೃತ್ತಿ ಬಳಸಿಕೊಂಡು ಬಿಟ್ಟಿದ್ದಾರಂತೆ! ಇದು ಯಾವ ನ್ಯಾಯ? ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಕಾರ್ಮಿಕ ಇಲಾಖೆ ಅಧಿಕಾರಿಗಳು ಹೇಳಿದಂತೆ ನಡೆಯಬೇಕಾ? ಪ್ರತಿನಿತ್ಯ ಒಂದೊಂದು ರೀತಿಯ ಕಾನೂನು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಬದಲಾವಣೆ ಆಗುತ್ತದೆಯಾ?
ಕಾನೂನು ಪ್ರಕಾರ ಮಕ್ಕಳನ್ನು ವಶಕ್ಕೆ ಪಡೆದ ಮೇಲೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸುವುದು ಕಾರ್ಮಿಕ ಇಲಾಖೆ ಇನ್ಸ್ಪೆಕ್ಟರ್ಗಳ ಕರ್ತವ್ಯ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸ್ಪಷ್ಟವಾಗಿ ಹೇಳಿದ್ದಾರೆ.
ಕಾರ್ಮಿಕ ಇಲಾಖೆಯ ಇನ್ಸ್ಪೆಕ್ಟರ್ಗಳ ದಿಮಾಕುತನಕ್ಕೆ ಕಡಿವಾಣ ಹಾಕುವರು ಕಾರ್ಮಿಕ ಇಲಾಖೆ ಆಯುಕ್ತರೋ? ಅಥವಾ ಕಾರ್ಮಿಕ ಇಲಾಖೆ ಮಂತ್ರಿಗಳ?, ಎಲ್ಲಾ ಅಧಿಕಾರಿಗಳನ್ನು ಬಾಯಿಗೆ ಬಂದಂತೆ ಮಾತನಾಡುವ ಅಧಿಕಾರವನ್ನು ಕಾರ್ಮಿಕ ಇಲಾಖೆ ಇನ್ಸ್ಪೆಕ್ಟರ್ ಗಳಿಗೆ ಕೊಟ್ಟವರು ಯಾರು? ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಉತ್ತರ ನೀಡುವರೆ ಕಾದು ನೋಡೋಣ!!!
