ಪಾವಗಡದಲ್ಲಿ ನಕ್ಸಲ್ ಭೀತಿ: ವೆಂಕಟೇಶ್ ಬಂಧನಕ್ಕೆ ಡ್ರೋನ್ ಕಣ್ಣಾವಲಿನಲ್ಲಿ ಬೃಹತ್ ಕೂಂಬಿಂಗ್ ಕಾರ್ಯಾಚರಣೆ

ತುಮಕೂರು: ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ನಕ್ಸಲ್ ಆತಂಕವು ಸಾರ್ವಜನಿಕರನ್ನು ಹಾಗೂ ಪೊಲೀಸ್ ಇಲಾಖೆಯನ್ನು ನಿದ್ದೆಗೆಡಿಸಿದೆ.

ತಾಲ್ಲೂಕಿನ ಕನಕಲಬೆಂಡೆಯಲ್ಲಿ ನಕ್ಸಲ್ ಶಂಕಿತ ‘ಕನಕಲಬೆಂಡೆಯ ಉಪ್ಪಾರ್ ವೆಂಕಟೇಶ್’ಗಾಗಿ ಪೊಲೀಸರು ತೀವ್ರ ಶೋಧನಾ ಕಾರ್ಯವನ್ನು ಮುಂದುವರಿಸಿದ್ದಾರೆ.

ಪಾವಗಡದಲ್ಲಿ ನಕ್ಸಲ್ ಭೀತಿ: ವೆಂಕಟೇಶ್ ಬಂಧನಕ್ಕೆ ಡ್ರೋನ್ ಕಣ್ಣಾವಲಿನಲ್ಲಿ ಬೃಹತ್ ಕೂಂಬಿಂಗ್ ಕಾರ್ಯಾಚರಣೆ
ಪಾವಗಡದಲ್ಲಿ ನಕ್ಸಲ್ ಭೀತಿ: ವೆಂಕಟೇಶ್ ಬಂಧನಕ್ಕೆ ಡ್ರೋನ್ ಕಣ್ಣಾವಲಿನಲ್ಲಿ ಬೃಹತ್ ಕೂಂಬಿಂಗ್ ಕಾರ್ಯಾಚರಣೆ

ಆರೋಪಿ ವೆಂಕಟೇಶ್ ಆಗಾಗ್ಗೆ ಗ್ರಾಮಸ್ಥರ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದು, ಆತಯನನ್ನು ಸೆರೆಹಿಡಿಯಲು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ನೇತೃತ್ವದಲ್ಲಿ ಬಿರುಸಿನ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಈ ಕಾರ್ಯಾಚರಣೆಗಾಗಿ ಒಟ್ಟು ಐದು ವಿಶೇಷ ಇನ್ಸ್‌ಪೆಕ್ಟರ್ ತಂಡಗಳನ್ನು ರಚಿಸಲಾಗಿದ್ದು, 1 ಡಿವೈಎಸ್ಪಿ, 5 ಜನ ಇನ್ಸ್‌ಪೆಕ್ಟರ್‌ಗಳು ಹಾಗೂ 10 ಜನ ಸಬ್‌ಇನ್ಸ್‌ಪೆಕ್ಟರ್‌ಗಳು ಇದರ ನೇತೃತ್ವ ವಹಿಸಿದ್ದಾರೆ.

ಇಂದು ಬೆಳಿಗ್ಗೆ 6:00 ಗಂಟೆಯಿಂದ 10:00 ಗಂಟೆಯವರೆಗೆ ಕನಕಲಬೆಂಡೆ ಸುತ್ತಮುತ್ತಲಿನ ಸುಮಾರು 10ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಬೃಹತ್ ಶೋಧ ಕಾರ್ಯ ನಡೆಸಲಾಗಿದೆ. ನಕ್ಸಲ್ ಶಂಕಿತ ವೆಂಕಟೇಶ್‌ನ ಜಾಡುಹಿಡಿಯಲು ಪೊಲೀಸರು ಅತ್ಯಾಧುನಿಕ ಡ್ರೋನ್ ಕ್ಯಾಮೆರಾಗಳ ಸಹಾಯವನ್ನೂ ಪಡೆದುಕೊಂಡಿದ್ದು, ತೀವ್ರ ಹುಡುಕಾಟ ಮುಂದುವರಿದಿದೆ.