ಲೋಕಸಭಾ ಚುನಾವಣೆ : ಏ.1 ರಂದು ಒಟ್ಟು 2 ನಾಮಪತ್ರ ಸಲ್ಲಿಕೆ

ಲೋಕಸಭಾ ಚುನಾವಣೆ : ಏ.1 ರಂದು ಒಟ್ಟು 2 ನಾಮಪತ್ರ ಸಲ್ಲಿಕೆ

ತುಮಕೂರು : ಏ.1: ಲೋಕಸಭಾ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಮಾರ್ಚ್28ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಏಪ್ರಿಲ್ 1,2024ರಂದು ಇಬ್ಬರು ಅಭ್ಯರ್ಥಿಗಳಿಂದ ಒಟ್ಟು 2 ನಾಮಪತ್ರಗಳು ಸಲ್ಲಿಕೆಯಾಗಿರುತ್ತವೆ.

ಲೋಕಸಭಾ ಚುನಾವಣೆ : ಏ.1 ರಂದು ಒಟ್ಟು 2 ನಾಮಪತ್ರ ಸಲ್ಲಿಕೆ
ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ವಿ.ಸೋಮಣ್ಣ (72 ವರ್ಷ, ನಂ.621, ಮುನಿಸಿಪಲ್ ನಂ.18, 13ನೇ ಅಡ್ಡರಸ್ತೆ, ಎಂ.ಆರ್.ಸಿ.ಆರ್. ಬಡಾವಣೆ, ವಿಜಯನಗರ, ಬೆಂಗಳೂರು-56೦೦4೦)

ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಕಪನಿಗೌಡ (69ವರ್ಷ, ಕಲ್ಕೆರೆ, ಕೊಡಗೀಹಳ್ಳಿ ಅಂಚೆ, ಕಸಬಾ ಹೋಬಳಿ, ತುರುವೇಕೆರೆ ತಾಲ್ಲೂಕು-572227) ಅವರುಗಳು ಏಪ್ರಿಲ್ 1ರಂದು ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.