ದುರಹಂಕಾರ ವರ್ತನೆ ತೋರಿದ ಕಾರ್ಯಪಾಲಕ ಇಂಜಿನಿಯರ್ ಹರೀಶ್

ತುಮಕೂರು : ಸಿದ್ದಗಂಗಾ ಮಠದ ಮೇಲ್ಸೇತುವೆ ಕಾಮಗಾರಿಯಲ್ಲಿ ಕಂಡುಬಂದ ಅವ್ಯವಸ್ಥೆ ಮತ್ತು ಕಳಪೆ ಕಾಮಗಾರಿಯ ಬಗ್ಗೆ ಮಾಹಿತಿ ಪಡೆಯಲು ಲೋಕೋಪಯೋಗಿ ಇಲಾಖೆಯಿಂದ ಪತ್ರಿಕೆಗಳಿಗೆ ನೀಡುವ ಟೆಂಡರ್ ಪ್ರಕಟಣೆಗಳನ್ನು ನಿಯಮಾನುಸಾರ ವಾರ್ತಾ ಇಲಾಖೆ ಮುಖಾಂತರವೇ ನೀಡಬೇಕು ಹಾಗೂ ಮುಂದಿನ ತಿಂಗಳು ಪತ್ರಿಕಾ ಸಂಪಾದಕರ ಸಂಘದ ಕಾರ್ಯಕ್ರಮ ವಿದ್ದು ಅದಕ್ಕೆ ತಾವು ಆಗಮಿಸಬೇಕು ಎಂದು ಹೇಳಲು ಪತ್ರಿಕಾ ಸಂಪಾದಕರ ಸಂಘದ ಸದಸ್ಯರು ಬುಧವಾರ ಮಧ್ಯಾಹ್ನ ೧೨ ಗಂಟೆಗೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಹರೀಶ್ ಕಛೇರಿಗೆ ಹೋದಾಗ ಅಲ್ಲಿ ಸುಮಾರು ಒಂದು ಗಂಟೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಕಾರಣ ಅನೇಕ ಖಾಸಗಿ ವ್ಯಕ್ತಿಗಳು ಇನ್… ಔಟ್… ಆಗುತ್ತಿದ್ದರು.

ನಂತರ ಅವರ ಕಛೇರಿ ಒಳಗೆ ಹೋದಾಗ ಹರೀಶ್ ನೀವು ಯಾರು ಎಂದು ಪ್ರಶ್ನಿಸಿದರು… ಪತ್ರಿಕೆಯ ಸಂಪಾದಕರ ಸಂಘದವರು ಎಂದು ಹೇಳುತ್ತಿದ್ದಂತೆ ಯಾಕೆ ಏನು ವಿಷಯ ಎಂದು ಕೇಳುವ ಸೌಜನ್ಯ ತೋರದೆ ನಡಿರಿ ಹೊರಗಡೆ ನಾಲ್ಕು ಗಂಟೆಯ ಮೇಲೆ ಬನ್ನಿ… ಯಾರೋ… ಇವರನ್ನ ಒಳಗಡೆ ಬಿಟ್ಟಿದ್ದು ಕಳುಹಿಸೋ ಆಚೆಗೆ…
ಎಂದು ದುರಹಂಕಾರದ ಮಾತುಗಳನ್ನು ಹಾಡಿದರು.

ಆದರೆ ಕೆಲವರಿಗೆ ಯಾವುದೇ ನಿಗಧಿತ ಸಮಯವಿಲ್ಲದೆ ಮುಕ್ತ ಅವಕಾಶವಿತ್ತು. ಕೆಲವರ ಜೊತೆ ಸಿಕ್ರೇಟ್ ಆಗಿ ಅರ್ಧ ಗಂಟೆಯಷ್ಟು ಮಾತನಾಡುವ ಕಾರ್ಯಪಾಲಕ ಇಂಜಿನಿಯರ್ ಹರೀಶ್ ಪತ್ರಿಕೆಯ ಸಂಪಾದಕರನ್ನು ಏನು ವಿಷಯ ಎಂದು ಕೇಳುವಷ್ಟು ಸಮಯ ಇರಲಿಲ್ಲವೇ ? ಇಲ್ಲ ಅಧಿಕಾರದ ಮದವೇ? ಈ ಜಾಗದಲ್ಲಿ ಹಿಂದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಆ ಸ್ಥಾನಕ್ಕೆ ಗೌರವ ತಂದುಕೊಟ್ಟಿರುವ ಅಧಿಕಾರಿಗಳಿಗೆ ಇವರು ಕಳಂಕ ಎನ್ನಬಹುದು.

ಆದರೆ ಸಮಾಜದ ಕಳಕಳಿವುಳ್ಳ ವರದಿ ಮಾಡುವ ಅಧಿಕಾರಿಗಳ ಮೇಲೆ ಗೌರವ ಹೊಂದಿರುವ ಸಂಪಾದಕರನ್ನು ನಡೆಸಿಕೊಳ್ಳುವ ರೀತಿ ಇದೆಯಾ…? ಎನ್ನುವ ಹಲವು ಪ್ರಶ್ನೆಗಳು ಮೂಡುತ್ತಿವೆ…

ಅಭಿವೃದ್ಧಿಗೆ ಮಾರಕ ಹರೀಶ್..!

ತುಮಕೂರು ಜಿಲೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಹರೀಶ್ ನಡೆಗೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಕೆಲಸ ದೇವರ ಕೆಲಸ ಎಂದು ಭಾವಿಸಿ ಕರ್ತವ್ಯ ನಿರ್ವಹಿಸಬೇಕಿರುವ ಇವರು ಮದವೇರಿದ ಆನೆಯಂತೆ ವರ್ತನೆ ಮಾಡುತ್ತಿದ್ದಾರೆ.ಸಮಸ್ಯೆ ಒತ್ತು ಕಛೇರಿಗೆ ಬರುವ ಸಾರ್ವಜನಿಕರ ಜೊತೆ ಸೌಜನ್ಯವಾಗಿ ವರ್ತನೆ ಮಾಡದೆ ದುರಹಂಕಾರದಿಂದ ವರ್ತಿಸುತ್ತಿದ್ದಾರೆ.ಉಡಾಪೆ ತೋರುವ ಇವರಿಂದ ಜಿಲ್ಲೆಯ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೆ..?

ಇಂತಹ ದುರಹಂಕಾರ ತೋರುವ ಹರೀಶ್ ವಿರುದ್ಧ ಗೃಹ ಹಾಗೂ ಜಿಲ್ಲಾಉಸ್ತುವಾರಿ ಸಚಿವರ ಡಾ.ಜಿ ಪರಮೇಶ್ವರ ಅವರು ಹಾಗೂ ಜಿಲ್ಲಾಧಿಕಾರಿ ಶುಭಕಲ್ಯಾಣ್ ಈ ಅಧಿಕಾರಿಯ ವಿರುದ್ದ ಕ್ರಮಕ್ಕೆ ಮುಂದಾಗಬೇಕು ಎಂದು ಸಂಪಾದಕರ ಸಂಘ ಆಗ್ರಹ.