ಹಳಿತಪ್ಪಿದ ತುಮಕೂರು ಜಿಲ್ಲಾಡಳಿತವನ್ನು ಸರಿಪಡಿಸಲು ಮತ್ತೊಬ್ಬರು ಜಿಲ್ಲಾ ಉಸ್ತುವಾರಿ ಸಚಿವ ಬೇಕು

ಹಳಿತಪ್ಪಿದ ತುಮಕೂರು ಜಿಲ್ಲಾಡಳಿತವನ್ನು ಸರಿಪಡಿಸಲು ಮತ್ತೊಬ್ಬ ಜಿಲ್ಲಾ ಉಸ್ತುವಾರಿ ಸಚಿವ ಬೇಕು

ತುಮಕೂರು : ರಾಜ್ಯದ 2ನೇ ಅತಿ ದೊಡ್ಡ ಜಿಲ್ಲೆ ತುಮಕೂರು ಜಿಲ್ಲೆಯ ಜಿಲ್ಲಾಡಳಿತ ಯಂತ್ರ ಸಂಪೂರ್ಣವಾಗಿ ಹಳಿ ತಪ್ಪಿದೆ ಎಂದು ಹೇಳಿದರು ತಪ್ಪಾಗಲಾರದು.
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಪರಮೇಶ್ವರ್ ರವರ ಮೃದು ಧೋರಣೆಯೋ… ಇಲ್ಲ ಇವರ ಕೆಲ ಹಿಂಬಾಲಕರಿಂದಲೋ… ಜಿಲ್ಲಾ ಆಡಳಿತ ಜನಸಾಮಾನ್ಯರ ಸಮಸ್ಯೆಗೆ ಸಂದಿಸುವಲ್ಲಿ ಸಂಪೂರ್ಣವಾಗಿ ವಿಪಲವಾಗಿದೆ ಎಂದು ಹೇಳಲಾಗುತ್ತಿದೆ.

ಪರಮೇಶ್ವರ್ ಸಜ್ಜನ ರಾಜಕಾರಣಿ ಹೌದು ಇವರು ಯಾರೋಂದಿಗೂ ವಿರೋಧ ಕಟ್ಟಿಕೊಳ್ಳುವಂತಹ ವ್ಯಕ್ತಿಯಲ್ಲ, ಆಯಕಟ್ಟಿನ ಜಾಗದಲ್ಲಿರುವ ಅಧಿಕಾರಿಗಳಿಂದ ಸರಿಯಾಗಿ ಕೆಲಸ ಮಾಡಲು ಖಡಕ್ ಸೂಚನೆ ನೀಡದೆ ಇರುವುದೇ ಇಂದು ಜಿಲ್ಲಾಡಳಿತದ ವೈಫಲ್ಯಕ್ಕೆ ಕಾರಣ ಎಂದು ಕೆಲವರು ಹೇಳುತ್ತಾರೆ, ಮತ್ತೆ ಕೆಲವರು ಹೇಳುವ ಪ್ರಕಾರ ಪರಮೇಶ್ವರವರ ಕೆಲ ಹಿಂಬಾಲಕರು ಅವರಿಗೆ ಬೇಕಾದ ಅಧಿಕಾರಿಗಳನ್ನು ಆಯಕಟ್ಟಿನ ಜಾಗದಲ್ಲಿ ಇರಿಸಿಕೊಂಡು ಅವರುಗಳಿಂದ ತಿಂಗಳ ವಂತಿಕೆ ಪಡೆಯುತ್ತಾ ಅವರು ಏನೇ ತಪ್ಪು ಮಾಡಿದರು ಅವರುಗಳ ವಿರುದ್ಧ ಯಾವುದೇ ಕ್ರಮ ಆಗದ ರೀತಿ ನೋಡಿಕೊಳ್ಳುತ್ತಿದ್ದಾರೆ ಅದರಿಂದಲೇ ಜಿಲ್ಲಾ ಆಡಳಿತದಿಂದ ಸರಿಯಾದ ರೀತಿಯಲ್ಲಿ ಕೆಲಸವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಈ ಮಧ್ಯೆ ಜನಸಾಮಾನ್ಯರ ಸಮಸ್ಯೆ ಬಗೆಹರಿಸುವ ಅಧಿಕಾರಿಗಳೇ ಇಲ್ಲದಂತಾಗಿದೆ, ಇರುವ ಸಮಸ್ಯೆಗಳನ್ನು ಪತ್ರಿಕೆಗಳಲ್ಲಿ ಬರೆದರೆ ಪರಮೇಶ್ವರ್ ರವರು ವರದಿಗಾರರನ್ನು ಮನಬಂದಂತೆ ನಿಂದಿಸುವ ಮನಸ್ಥಿತಿಗೆ ಇಳಿದಿರುವುದು ನಿಜಕ್ಕೂ ದುರಾದೃಷ್ಟವೇ ಸರಿ…!

ಅಧಿಕಾರಿಗಳಿಗೆ ಸರಿಯಾದ ರೀತಿ ಕೆಲಸ ಮಾಡಲು ಸೂಚನೆ ನೀಡಲು ಯಾರು ಇಲ್ಲದಿರುವ ಕಾರಣ ಅಧಿಕಾರಿ ಅಧಿಕಾರಿಗಳ ನಡುವೆ ವೈಮನಸ್ಯ ಹೆಚ್ಚಾಗಿ ಜನಸಾಮಾನ್ಯರ ಸಮಸ್ಯೆ ಕೇಳುವರೇ ಇಲ್ಲದಂತಾಗಿದೆ ಉಸ್ತುವಾರಿ ಸಚಿವರ ಬಳಿ ಜನಸಾಮಾನ್ಯರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಅವರು ಸಿಗುತ್ತಿಲ್ಲ ಒಂದು ವೇಳೆ ಸಿಕ್ಕಿ ಸಮಸ್ಯೆ ಹೇಳಿಕೊಂಡರು ಸಮಸ್ಯೆ ಬಗೆಹರಿಯುತ್ತಿಲ್ಲ ಎಂಬ ಮಾತುಗಳು ಹೆಚ್ಚಾಗಿ ಕೇಳಿ ಬರುತ್ತಿವೆ.

ಪರಮೇಶ್ವರ್ ಅವರು ನೆಪ ಮಾತ್ರಕ್ಕೆ ಅಧಿಕಾರಿಗಳ ಸಭೆ ಕರೆದು ತೋರಿಕೆಗಷ್ಟೇ ಕೆಲಸ ಮಾಡಲು ಸೂಚಿಸುತ್ತಾರೆ, ಸಚಿವರ ಸೂಚನೆಯನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ ಅಂದಮೇಲೆ ಸಚಿವರ ಸಭೆ, ಸಲಹೆ, ಮತ್ತು ಸೂಚನೆ ನಾಮಕಾವಸ್ತೆಗಷ್ಟೇ ಎನ್ನುತ್ತಾರೆ ಜನಸಾಮಾನ್ಯರು. ಅಂದಮೇಲೆ ಜಿಲ್ಲಾಡಳಿತವನ್ನು ಸರಿಪಡಿಸಲು ಹಾಲಿ ಸಚಿವರ ಜೊತೆಗೆ ಮತ್ತೊಬ್ಬ ಉಸ್ತುವಾರಿ ಸಚಿವರ ಅವಶ್ಯಕತೆ ಇರುವುದು ಸ್ಪಷ್ಟವಾಗಿ ಕಾಣುತ್ತಿದೆ ಅಲ್ಲವೇ…