ತುಮಕೂರು: ಜಿಲ್ಲಾಡಳಿತ ಲಕ್ಷಾಂತರ ರು ಖರ್ಚು ಮಾಡಿ ತುಮಕೂರು ದಸರಾ ಆಚರಿಸುತ್ತಿರುವುದು ನಿಜಕ್ಕೂ ಸಂತೋಷ ಆದರೆ ಕಾರ್ಯಕ್ರಮ ನಡೆಸಿ ಕೊಡಲು ಬರುವ ಕಲಾವಿದರಿಗೆ ಒಂದು ಲೋಟ ನೀರಿನ ವ್ಯವಸ್ಥೆ ಮಾಡಿಲ್ಲದಿರುವುದು ನಿಜಕ್ಕೂ ನೋವಿನ ಸಂಗತಿ.
ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒ ಇನ್ನಿತರ ಅಧಿಕಾರಗಳ ಸಮಕ್ಷಮದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದಸರಾ ಹಿನ್ನೆಲೆಯಲ್ಲಿ ಕಲಾವಿದರು ಗಳ ಸಭೆ ನಡೆಸಲಾಗಿತ್ತು. ಹಲವು ವಿಷಯಗಳು ಚರ್ಚೆಗೆ ಬಂದು ಕಾರ್ಯಕ್ರಮ ನಡೆಸಿಕೊಡಲು ಪ್ರತಿನಿತ್ಯ ಬರುವ ಕಲಾವಿದರಿಗೆ ತಿಂಡಿ, ಕಾಫಿ, ಟಿ, ಊಟ ನೀರಿನ ವ್ಯವಸ್ಥೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆ ಮಾತು ಸುಳ್ಳಾಗಿದೆ, ಕುಡಿಯಲು ಒಂದು ಲೋಟ ನೀರಿನ ವ್ಯವಸ್ಥೆಯೂ ಸಹ ಮಾಡಿಲ್ಲ ಎಂದು ತುಮಕೂರು ಜಿಲ್ಲೆಯ ಕಲಾವಿದರ ದೂರು!!
ಲಕ್ಷಾಂತರ ರು ಖರ್ಚು ಮಾಡಿ ತುಮಕೂರು ದಸರಾ ಮಾಡುತ್ತಿರುವ ಜಿಲ್ಲಾಡಳಿತ ಜಿಲ್ಲೆಯ ವಿವಿಧಡೆಯಿಂದ, ಹೊರಗಿನಿಂದ ಪ್ರತಿನಿತ್ಯ ಕಾರ್ಯಕ್ರಮ ನಡೆಸಿಕೊಡಲು ಬರುವ ಕಲಾವಿದರು ಗಳಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಲಿಲ್ಲ ಎಂದರೆ ತುಮಕೂರು ದಸರಾ ಹಬ್ಬ ಆಚರಿಸಿ ಪ್ರಯೋಜನವೇನು?? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ? ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು, ಸಾಂಸ್ಕೃತಿಕ ಕಾರ್ಯಕ್ರಮದ ವ್ಯವಸ್ಥೆಯ ಅಧಿಕಾರಿಗಳ ತಂಡ, ಆಹಾರ ಸಮಿತಿ ತಂಡ ಕಲಾವಿದರು ಗಳಿಗೆ ಅಗತ್ಯ ಸೌಲಭ್ಯ ಒದಗಿಸುವ ವ್ಯವಸ್ಥೆ ಮಾಡಬೇಕಿತ್ತು, ಕುಡಿಯಲು ನೀರು ಸಹ ವ್ಯವಸ್ಥೆ ಮಾಡಿಲ್ಲ ಅಂದರೆ ಕಾರ್ಯಕ್ರಮಕ್ಕೆ ಆಗಮಿಸುವ ಜನರೇ ಜಿಲ್ಲಾಡಳಿತದ ಸ್ಥಿತಿಗತಿ ಬಗ್ಗೆ ಯೋಚಿಸಬೇಕು!!
ತುಮಕೂರು ಜಿಲ್ಲಾಧಿಕಾರಿಗಳೇ ನಾಳೆಂದಲಾದರು ಕಾರ್ಯಕ್ರಮ ನಡೆಸಿಕೊಡಲು ಬರುವ ಜಿಲ್ಲೆಯ ಮತ್ತು ಹೊರಗಿನ ಕಲಾವಿದರು ಗಳಿಗೆ ಸ್ವಲ್ಪ ಮಾತನಾಡಿಸಿ ಕಾಫಿ ಚಹಾ, ತಿಂಡಿ ಊಟದ ವ್ಯವಸ್ಥೆಯನ್ನು ಮಾಡಲು ಮುಂದಾಗಿ. ತುಮಕೂರು ಜಿಲ್ಲೆ ಅನ್ನ ದಾಸೋಹಕ್ಕೆ, ಉತ್ತಮ ಆತಿತ್ಯಕ್ಕೆ ಹೆಸರುವಾಸಿ. ಅನ್ನುವುದನ್ನು ಮರೆಯಬೇಡಿ, ಜಿಲ್ಲಾಡಳಿತದ ಮರ್ಯಾದೆಯನ್ನು ಕಾಪಾಡಿಕೊಳ್ಳಿ.