ತುಮಕೂರಿನಲ್ಲಿ ಶಾಸಕ ಜ್ಯೋತಿಗಣೇಶ್ ಮತಯಾಚನೆ

ತುಮಕೂರಿನಲ್ಲಿ ಶಾಸಕ ಜ್ಯೋತಿಗಣೇಶ್ ಮತಯಾಚನೆ

ತುಮಕೂರು: ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರ ನೇತೃತ್ವದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಅವರ ಪರವಾಗಿ ಬುಧವಾರ ನಗರದಲ್ಲಿ ಮತಯಾಚನೆ ಮಾಡಿದರು.

ಶ್ರೀರಾಮ ನವಮಿಯ ಶುಭದಿನದಂದು ದೇವರಾಯಪಟ್ಟಣದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಜ್ಯೋತಿಗಣೇಶ್ ಅವರು, ನಂತರ ಮುಖಂಡರೊಂದಿಗೆ ವಿವಿಧೆಡೆ ಮತಯಾಚನೆ ಮಾಡಿದರು.


ದೇಶದ ಭವಿಷ್ಯ ನಿರ್ಧರಿಸುವ, ದೇಶವನ್ನು ಸಮರ್ಥವಾಗಿ ಮುನ್ನಡೆಸುವ ನಾಯಕನ ಆಯ್ಕೆ ಮಾಡುವಂತಹ ಮಹತ್ವದ ಚುನಾವಣೆ ಇದಾಗಿದೆ. ದೇಶದ ಪ್ರಸ್ತುತ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿಯವರೇ ಮೊತ್ತೊಮ್ಮೆ ಪ್ರಧಾನಿ ಆಗಬೇಕು, ದೇಶದ ಭದ್ರತೆ, ಆರ್ಥಿಕ ಸುಭದ್ರತೆಗೆ, ಅಭಿವೃದ್ಧಿಗೆ ಮೋದಿಯವರೇ ಪರಿಹಾರ ಎಂದು ಹಲವು ನಾಯಕರು ತೀರ್ಮಾನ ಮಾಡಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರೂ ಮೋದಿಯವರ ನಾಯಕತ್ವ ಒಪ್ಪಿ ಈ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡು ಒಟ್ಟಾಗಿ ಚುನಾವಣೆ ಎದುರಿಸಲು ಜೊತೆಗೂಡಿದ್ದಾರೆ ಎಂದು ಹೇಳಿದರು.

ಪ್ರಧಾನಿ ಮೋದಿಯವರು ಮತ್ತೊಮ್ಮೆ ದೇಶದ ಆಡಳಿತ ಚುಕ್ಕಾಣಿ ಹಿಡಿಯಲು ಅವರಿಗೆ ಶಕ್ತಿ ತುಂಬಲು ತುಮಕೂರು ಕ್ಷೇತ್ರದಲ್ಲಿ ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಅವರನ್ನು ಆಯ್ಕೆ ಮಾಡಬೇಕು. ಅಭಿವೃದ್ಧಿ ಹರಿಕಾರರೆಂದು ಹೆಸರಾದ ಅನುಭವಿ ನಾಯಕ ಸೋಮಣ್ಣ ಅವರನ್ನು ಈ ಚುನಾವಣೆಯಲ್ಲಿ ಆಯ್ಕೆ ಮಾಡಿದರೆ ತುಮಕೂರು ಕ್ಷೇತ್ರದ ಸಮಗ್ರ ಅಭಿವೃದ್ಧಿ ನಿರೀಕ್ಷಿಸಬಹುದು. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ತಮ್ಮದೇ ಆದ ಚಿಂತನೆ, ಯೋಜನೆಗಳನ್ನು ಸಿದ್ಧಪಡಿಸಿಕೊಂಡಿರುವ ಸೋಮಣ್ಣನವರು ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಲಿದ್ದಾರೆ ಎಂದು ಶಾಸಕ ಜ್ಯೋತಿಗಣೇಶ್ ತಿಳಿಸಿದರು.

ಚುನಾವಣಾ ಪ್ರಚಾರದ ವೇಳೆ ಜಿಲ್ಲಾ ಬಿಜೆಪಿ ಖಜಾಂಚಿ ಡಾ.ಪರಮೇಶ್, ರಾಜ್ಯ ಉಪಾಧ್ಯಕ್ಷ ಎಸ್.ಶಿವಪ್ರಸಾದ್, ಎಸ್.ಪಿ.ಚಿದಾನಂದ್, ರಾಜ್ಯ ವಕ್ತಾರ ಹೆಚ್.ಎನ್.ಚಂದ್ರಶೇಖರ್, ನಗರ ಅಧ್ಯಕ್ಷ ಹನುಮಂತರಾಜು, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ನಗರ ಅಧ್ಯಕ್ಷ ವಿಜಯ್‌ಗೌಡ, ರೈತ ಘಟಕ ಅಧ್ಯಕ್ಷ ರಂಗನಾಥ್, ಎಸ್ಟಿ ಘಟಕ ರಾಜ್ಯ ಉಪಾಧ್ಯಕ್ಷ ಸೋಲಾರ್ ಕೃಷ್ಣಮೂರ್ತಿ, ವಕ್ತಾರ ಮಧು, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನವಚೇತನ್, ನಗರ ಪಾಲಿಕೆ ಮಾಜಿ ಸದಸ್ಯರಾದ ನಿರ್ಮಲಾ ಶಿವಕುಮಾರ್, ಮಂಜುನಾಥ್, ಚಂದ್ರಕಲಾ ಪುಟ್ಟರಾಜು, ಮುನಿಯಪ್ಪ, ಡಿ.ಅರ್.ಬಸವರಾಜು, ಲೋಕೇಶ್, ಜಯಪುರ ಮಂಜುನಾಥ್, ಎಸ್ಸಿ ಮೋರ್ಚಾ ನಗರ ಅಧ್ಯಕ್ಷ ಹನುಮಂತರಾಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಪಿ.ಅಂಜನಮೂರ್ತಿ, ಮುಖಂಡರಾದ ಡಾ.ಸುರೇಶ್‌ಬಾಬು, ವಿರೂಪಾಕ್ಷಪ್ಪ, ಅಂಜನಪ್ಪ, ಗಣೇಶ್ ಜಿ.ಪ್ರಸಾದ್, ಸತ್ಯಮಂಗಲ ಜಗದೀಶ್,ನವೀನ್ ಜಯಪುರ, ಪ್ರೇಮಾ ಹೆಗಡೆ, ಜ್ಯೋತಿ ತಿಪ್ಪೇಸ್ವಾಮಿ, ತಾಹೇರಾ ಕುಲ್ಸಂ, ಲೀಲಾವತಿ ಮೊದಲಾದವರು ಶಾಸಕರ ಜೊತೆಗಿದ್ದು.