ಲೋಕಸಭಾ ಚುನಾವಣೆ : ಏ.3 ರಂದು ಒಟ್ಟು 7 ನಾಮಪತ್ರ ಸಲ್ಲಿಕೆ

ಲೋಕಸಭಾ ಚುನಾವಣೆ : ಏ.3 ರಂದು ಒಟ್ಟು 7 ನಾಮಪತ್ರ ಸಲ್ಲಿಕೆ

ತುಮಕೂರು : ಲೋಕಸಭಾ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಮಾರ್ಚ್ ೨೮ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಏಪ್ರಿಲ್ ೩, ೨೦೨೪ರಂದು ೫ ಅಭ್ಯರ್ಥಿಗಳಿಂದ ಒಟ್ಟು ೭ ನಾಮಪತ್ರಗಳು ಸಲ್ಲಿಕೆಯಾಗಿರುತ್ತವೆ.

ತುಮಕೂರು ಲೋಕಸಭಾ ಕ್ಷೇತ್ರಕ್ಕೆ ನ್ಯಾಷನಲ್ ಮಹಾ ಸಭಾ ಪಕ್ಷದ ಅಭ್ಯರ್ಥಿಯಾಗಿ ಬಸವರಾಜು ಹೆಚ್.ಆರ್.(೫೩ ವರ್ಷ, #೩೭೧/ಎ, ಹಿಂಡಿಸಗೆರೆ ಗ್ರಾಮ, ಸಿ.ಎಸ್.ಪುರ ಹೋಬಳಿ, ಗುಬ್ಬಿ ತಾಲ್ಲೂಕು, ತುಮಕೂರು ಜಿಲ್ಲೆ-೫೭೨೨೧೩) ಅವರು ೧ ನಾಮಪತ್ರ.

ಲೋಕಸಭಾ ಚುನಾವಣೆ : ಏ.3 ರಂದು ಒಟ್ಟು 7 ನಾಮಪತ್ರ ಸಲ್ಲಿಕೆ

ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷದ ಅಭ್ಯರ್ಥಿಯಾಗಿ ಡಿ.ಎಂ. ಅನಂತರಾಜು(೪೫ವರ್ಷ, ನಂ.೨, ಶ್ರೀ ಬಾಲಾಜಿ ನಿಲಯ, ೩ನೇ ಮುಖ್ಯರಸ್ತೆ, ಲಕ್ಷ್ಮಣ ನಗರ, ಕೃಷ್ಣ ಇಂಟರ್ ನ್ಯಾಷನಲ್ ಶಾಲೆ ಎದುರು, ಹೆಗ್ಗನಹಳ್ಳಿ ಕ್ರಾಸ್, ಬೆಂಗಳೂರು-೫೬೦೦೯೧) ಅವರು ೧ ನಾಮಪತ್ರ.

ಪಕ್ಷೇತರ ಅಭ್ಯರ್ಥಿಯಾಗಿ ಹನುಮಯ್ಯ ಎನ್. (೩೬ವರ್ಷ, ಗಂಟೆಗಾನಹಳ್ಳಿ, ಹೂಲೀಕುಂಟೆ ಅಂಚೆ, ಕಸಬಾ ಹೋಬಳಿ, ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ) ಅವರು ೧ ನಾಮಪತ್ರ.

ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ವಿ.ಸೋಮಣ್ಣ (೭೨ ವರ್ಷ, ನಂ.೬೨೧, ಮುನಿಸಿಪಲ್ ನಂ.೧೮, ೧೩ನೇ ಅಡ್ಡರಸ್ತೆ, ಎಂ.ಆರ್.ಸಿ.ಆರ್. ಬಡಾವಣೆ, ವಿಜಯನಗರ, ಬೆಂಗಳೂರು-೫೬೦೦೪೦) ಅವರು ೩ ನಾಮಪತ್ರ ಹಾಗೂ ಬಹುಜನ ಸಮಾಜಪಾರ್ಟಿ ಅಭ್ಯರ್ಥಿಯಾಗಿ ಜೆ.ಎನ್.ರಾಜಸಿಂಹ (೬೧ವರ್ಷ, ದೊಡ್ಡ ಅಗ್ರಹಾರ, ದೊಡ್ಡ ಅಗ್ರಹಾರ ಅಂಚೆ, ಸಿರಾ ತಾಲ್ಲೂಕು, ತುಮಕೂರು ಜಿಲ್ಲೆ-೫೭೨೧೨೫) ಅವರು ೧ ನಾಮಪತ್ರ ಸೇರಿದಂತೆ ಒಟ್ಟು ೭ ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.