ತುಮಕೂರು – ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ತುಮಕೂರಿನಲ್ಲಿ ವರದಿಯಾಗಿದೆ.
ತುಮಕೂರಿನ ಹೊನ್ನೇನಹಳ್ಳಿ ಗ್ರಾಮದ ಯುವಕ ದರ್ಶನ್ (22 ) ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದನು.

ಕಳೆದ ಸೋಮವಾರ ಸ್ನೇಹಿತರೊಂದಿಗೆ ಗಣಪತಿ ಇಟ್ಟಿದ್ದು ಸೋಮವಾರ ರಾತ್ರಿಯಿಂದ ಯುವಕ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಪೋಷಕರು ತುಮಕೂರು ನಗರ ಠಾಣೆಯಲ್ಲಿ ದರ್ಶನ್ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನ ಹೊನ್ನೇನಹಳ್ಳಿಯ ಕೆರೆ ಬಳಿ ಯುವಕನ ಪಾದರಕ್ಷೆ, ಪತ್ತೆಯಾದ ಹಿನ್ನೆಲೆಯಲ್ಲಿ ಯುವಕನ ಹುಡುಕಾಟವನ್ನು ಅಗ್ನಿಶಾಮಕ ತಂಡದೊಂದಿಗೆ ಮಾಡಿದ್ದರು ಆದರೆ ಯುವಕನ ಶವ ಪತ್ತೆಯಾಗಿರಲಿಲ್ಲ ಆದರೆ ಇಂದು ಬೆಳಗ್ಗೆ ಹೊನ್ನೇನಹಳ್ಳಿಯ ನರೇ ಕಟ್ಟೆಯಲ್ಲಿ ಶವ ಕಂಡುಬದಿದೆ.
