ಚಾಕುವಿನಿಂದ ಚುಚ್ಚಿ ಯುವಕನ ಕೊಲೆ

ತುಮಕೂರು: ಯಾವುದೋ ದುರುದ್ದೇಶದಿಂದ ಯುವಕನೊಬ್ಬನನ್ನು ಮತ್ತೋರ್ವ ಯುವಕ ಚಾಕುವಿನಿಂದ ಚುಚ್ಚಿ ಹೊಡೆದು ಕೊಲೆಗೈದಿರುವ ಘಟನೆ ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ನಡೆದಿದೆ.

ಜಯಪುರ ಮುಖ್ಯ ರಸ್ತೆ ಪಿ ಎಚ್ ಕಾಲೋನಿ 6ನೇ ಕ್ರಾಸ್ ವಾಸಿ ಸೈಯದ್ ಸುಹೇಲ್ (21) ಕೊಲೆಯಾಗಿರುವ ಯುವಕ. ದಿಬ್ಬೂರು ವಾಸಿ ಮಹಮ್ಮದ್ ರಬ್ಬಾನ್ (23) ಕೊಲೆಗೈದಿರುವ ಯುವಕ ಎಂದು ಪೊಲೀಸ್ ಮೂಲಗಳು ದೃಢ ಪಡಿಸಿವೆ.

ಸುದ್ದಿ ತಿಳಿದು ಕೂಡಲೇ ತಿಲಕ್ ಪಾರ್ಕ್ ಸಿಪಿಐ ನದಾಫ್, ಪಿ ಎಸ್ ಐ ಯೋಗೀಶ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲೆಸಿಕೊಂಡು ತನಿಕಾಕಾರ್ಯ ಮುಂದುವರಿಸಿದ್ದಾರೆ.

ಘಟನೆ ಬಗ್ಗೆ ಪೊಲೀಸರ ತನಿಖೆಯಿಂದಷ್ಟೇ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.