ಸಚಿವರ ಸರ್ವಾಧಿಕಾರ ಧೋರಣೆ ಸರಿಯೇ..?

ಸಚಿವರ ಸರ್ವಾಧಿಕಾರ ಧೋರಣೆ ಸರಿಯೇ..?
ತುಮಕೂರು- ಕಲ್ಪತರುನಾಡು ತುಮಕೂರು ನಗರದಲ್ಲಿ ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಒಲಂಪಿಕ್ ಸಂಸ್ಥೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟಕ್ಕೆ ಸ್ಥಳೀಯ ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳಿಗೂ ಆಯೋಜಕರು ನೀಡಿರುವ ಗುರುತಿನ ಪತ್ರ ಇಲ್ಲವೆಂದು ಕೆಲ ಪತ್ರಕರ್ತರನ್ನು ಕಾರ್ಯಕ್ರಮದ ಉದ್ಘಾಟನೆಗೆ ಪ್ರವೇಶ ನಿರಾಕರಿಸಿದ್ದು ಬೇಸರದ ಸಂಗತಿ.

ಸಚಿವರು ತಮಗೆ ಬೇಕಾದ ಅಧಿಕಾರಿಗಳನ್ನು ಮಾತ್ರ ಸಂಪರ್ಕ ಇಟ್ಟುಕೊಂಡು ಸಚಿವರು ಸೂಚಿಸಿದ ರೀತಿ ಕೆಲಸ ಮಾಡುವಂತೆ ತಾಕೀತು ಮಾಡಿ ಕೆಲ ಮಂದಿಗೆ ಮಾತ್ರ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪಾಸ್ ಗಳನ್ನು ವಿತರಣೆ ಮಾಡಿ, ಸ್ಥಳೀಯ ಮಾಧ್ಯಮ ಸಂಸ್ಥೆಗಳನ್ನು ಕಡೆಗಣಿಸುವ ಜತೆಗೆ ಉದ್ದೇಶಪೂರ್ವಕವಾಗಿಯೇ ಅವಮಾನಿಸಿದ ರೀತಿ…!

ಸಚಿವರು ಸಜ್ಜನ ರಾಜಕಾರಣಿ ಎಂದು ಕೆಲವರು ಹೇಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರ ವರ್ತನೆ ನಿಜಕ್ಕೂ ಸರ್ವಾಧಿಕಾರವನ್ನೂ ಮೀರಿಸುವಂತೆ ಕಾಣುತ್ತಿದೆ.

ಸರ್ವಾಧಿಕಾರ ಎಂಬುದು ಬಹುಕಾಲ ಉಳಿಯುವುದಿಲ್ಲ ಎಂಬ ಸತ್ಯವನ್ನು ತಿಳಿದರೆ ಒಳ್ಳೆಯದು. ಜಿಲ್ಲಾಡಳಿತ ಎಂಬ ಬಾಣವನ್ನು ಪತ್ರಕರ್ತರ ಮೇಲೆ ಬಿಟ್ಟು, ನಾನು ಏನು ಮಾಡಿದರೂ ನಡೆಯುತ್ತದೆ ಎನ್ನುವ ಮನೋಭಾವ ಇದ್ದಂತೆ ಕಾಣುತ್ತಿದೆ. ಅದಕ್ಕೆ ಉದಾಹರಣೆ ಎಂದರೆ ಈ ಹಿಂದೆ ಕೆಲ ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದ ಕೀರ್ತಿಯೂ ಇವರಿಗುಂಟು.

ಇದೇ ರೀತಿ ಮುಂದಿನ ದಿನದಲ್ಲಿ ನಾನು ಏನೇ ಮಾಡಿದರೂ ಪತ್ರಕರ್ತರು ನನ್ನ ಮುಂದೆ ಯಾವುದೇ ಚರ್ಚೆ ಮಾಡುವಂತಿಲ್ಲ. ಮಾಡಿದರೆ ಅವರಿಗೂ ಈ ಹಿಂದೆ ಪತ್ರಕರ್ತರಿಗಾದ ಅವಮಾನ, ಪ್ರಕರಣ ದಾಖಲು ಮುಂದುವರೆಯುತ್ತದೆ ಎಂಬ ರೀತಿಯಲ್ಲಿ ಕ್ರೀಡಾಕೂಟ ವಿಚಾರದಲ್ಲೂ ಇವರ ವರ್ತನೆ ಮುಂದುವರೆದಿರುವುದು ನಿಜಕ್ಕೂ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.