ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿ ಮೇಲೆ ಲೋಕ ದಾಳಿ

ತುಮಕೂರು: ನಗರದ ಕುಣಿಗಲ್ ರಸ್ತೆಯಲ್ಲಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಮೇಲೆ ತುಮಕೂರು ಮತ್ತು ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳ ತಂಡ ದಿಡೀರ್ ದಾಳಿ ನಡೆಸಿ ದಾಖಲಾತಿಗಳನ್ನು ಪರಿಶೀಲಿಸುತ್ತಿರುವ ಘಟನೆ ನಡೆದಿದೆ.

ಭೂ ಒಡೆತನ ಯೋಜನೆ, ಗಂಗಾ ಕಲ್ಯಾಣ, ವಿವಿಧ ಯೋಜನೆಗಳ ಸಾಲ ವಿತರಣೆ ಸೇರಿದಂತೆ ನಿಗಮದ ಯೋಜನೆಗಳಲ್ಲಿ ಬಾರಿ ಅವ್ಯವಹಾರ ನಡೆದಿದೆ ಎಂಬ ದೂರಿನ ಮೇರೆಗೆ ಈ ದಾಳಿ ನಡೆದಿದೆ ಎನ್ನಲಾಗಿದೆ. ಭೂ ಒಡೆತನ ಯೋಜನೆಗೆ ಸಂಬಂಧಿಸಿ ದಂತೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದು ಅದಕ್ಕೆ ಸಂಬಂಧಿಸಿದ ದಾಖಲಾತಿಗಳ ಪರಿಶೀಲನೆಯು ನಡೆಯುತ್ತಿದೆ.

ಹೆಚ್ಚಿನ ಮಾಹಿತಿ ಸಂಜೆ ವೇಳೆಗೆ ತಿಳಿಯಬಹುದೆಂದು ಲೋಕಾಯುಕ್ತ ಮೂಲಗಳು ತಿಳಿಸುವೆ. ಲೋಕಾಯುಕ್ತ ಎಸ್ ಪಿ. ಲಕ್ಷ್ಮೀನಾರಾಯಣ್, ನೇತೃತ್ವದಲ್ಲಿ ಡಿ. ವೈ. ಎಸ್. ಪಿ. ಕೆ.ಜಿ. ರಾಮಕೃಷ್ಣ. ಇನ್ಸ್ಪೆಕ್ಟರ್ ಶಿವರುದ್ರಪ್ಪ ಮೇಟಿ, ಮತ್ತವರ ತಂಡ, ಬೆಂಗಳೂರಿನಿಂದ ಆಗಮಿಸಿರುವ ಇನ್ಸ್ಪೆಕ್ಟರ್ ರಾಜು ಮತ್ತವರ ತಂಡ ತೀವ್ರ ಶೋಧನೆಯಲ್ಲಿ ತೊಡಗಿದ್ದಾರೆ