ತುಮಕೂರು : ತುಮಕೂರು ಕಾರ್ಮಿಕ ಅಧಿಕಾರಿಯಾಗಿ ಇಬ್ರಾಹಿಂ ಸಾಬ್ ಜಿ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.
ತುಮಕೂರಿನಲ್ಲಿ ಕಾರ್ಮಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ತೇಜಾವತಿ .ಕೆ ಅವರನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.
ಇಬ್ರಾಹಿಂ ಸಾಬ್ ಜಿ ಅವರು ದಾವಣಗೆರೆ ಕಾರ್ಮಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.