ಸಿರಾ ನಗರ ಅಭಿವೃದ್ಧಿ ಪ್ರಾಧಿಕಾರ ಆಯುಕ್ತರ ಕಚೇರಿ ಸೇರಿ ಐದು ಕಡೆ ಲೋಕಾ ಪೊಲೀಸರ ದಾಳಿ

ತುಮಕೂರು: ತಮ್ಮ ಆದಾಯಕ್ಕಿಂತ ಮೀರಿ ಹೆಚ್ಚು ಆಸ್ತಿಪಾಸ್ತಿ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಶಿರಾ ನಗರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಕಚೇರಿ ಸೇರಿದಂತೆ ಐದು ಕಡೆ ತುಮಕೂರು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದಾಖಲಾತಿಗಳನ್ನು ಪರಿಶೀಲಿಸುತ್ತಿರುವ ಘಟನೆ ಇಂದು ನಡೆದಿದೆ.

ಶಿರಾ ನಗರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಬಿಟಿ ರಂಗಸ್ವಾಮಿ ಎಂಬುವರ ಕಚೇರಿ. ಹಿರಿಯೂರು ಎರಡು ಕಡೆ ಬೆಂಗಳೂರು ತುಮಕೂರು ಸೇರಿದಂತೆ ಒಟ್ಟು ಐದು ಕಡೆ ಏಕಕಾಲದಲ್ಲಿ ದಾಳಿ ನಡೆಸಿ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ತುಮಕೂರು ಲೋಕಾಯುಕ್ತ ಎಸ್ ಪಿ ಮಲ್ಲೇಶ್ ನೇತೃತ್ವದಲ್ಲಿ ಡಿ ವೈ ಎಸ್ ಪಿ ಗಳಾದ ಮಂಜುನಾಥಗೌಡ. ಸಂತೋಷ್ ಇನ್ಸ್ಪೆಕ್ಟರ್ ಗಳಾದ ರಾಘವೇಂದ್ರ, ನಿರ್ಮಲ, ಶಾಂತಿನಾಥ್ , ರಾಜು, ಮತ್ತು ಸಿಬ್ಬಂದಿ ವರ್ಗ ದಾಳಿಯಲ್ಲಿ ಭಾಗವಹಿಸಿದ್ದು ಸಂಜೆ ವೇಳೆಗೆ ಹೆಚ್ಚಿನ ಮಾಹಿತಿ ದೊರೆಯಲಿದೆ.