ಮಧುಗಿರಿ: ಜಮೀನೊಂದರ ಪೌತಿ ಖಾತೆ ಮಾಡಲು 1ಲಕ್ಷ ರೂ ಗಳಿಗೆ ಲಂಚದ ಬೇಡಿಕೆ ಇಟ್ಟು 30ಸಾವಿರ ರೂಗಳನ್ನು ಪಡೆಯುತ್ತಿದ್ದ ಕಸಬಾ ಇನ್ಸ್ಪೆಕ್ಟರ್ ನಾಗೇಶ್ ರವರನ್ನು ತುಮಕೂರು ಲೋಕಾಯುಕ್ತ ಎಸ್ಪಿ ನೇತೃತ್ವದ ತಂಡ ತಾಲೂಕು ಆಡಳಿತ ಕಚೇರಿಯಲ್ಲಿ ಗುರುವಾರದಂದು ದಾಳಿ ನಡೆಸಿ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಕಳೆದ 6 ತಿಂಗಳಿಂದ ಕೆಲಸ ಮಾಡದೇ ವಿಳಂಬ ಮಾಡಿದ್ದು, ರೇಣುಕೇಶ್ ಬಿನ್ ಲಕ್ಷ್ಮೀ ನಾರಾಯಣಪ್ಪ ಮುದ್ದೇನಹಳ್ಳಿ ಗಂಜಲಗುಂಟೆ ಪಂಚಾಯತ್. ತಾಯಿ ರತ್ನಮ್ಮ ಹಾಗೂ ದೊಡಮ್ಮ ಗಂಗಮ್ಮ ಇವರ ಹೆಸರಿಗೆ ಪೌತಿ ಖಾತೆ ಚೆಕ್ ಲಿಸ್ಟ್ ತೆಗೆಯುವಾಗ ತಾಲೂಕು ಆಡಳಿತ ಸೌದ ಕಛೇರಿಯ ಕೆ ಸ್ವನ್ (KSWAN) ಆಫೀಸ್ ನಲ್ಲಿ ರೈಡ್ ನಡೆದಿದೆ.
ದೂರುದಾರರ ಹೇಳಿಕೆ ಪ್ರಕಾರ 1 ಲಕ್ಷದ ಹಣದಲ್ಲಿ ಈಗಾಗಲೇ 45,000ಗಳನ್ನು ಕಸಬಾ ಅರ್ ಐ ನಾಗೇಶ್ ಅವರ ಪತ್ನಿಯ ಹೆಸರಿನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದ್ದು , ಗುರುವಾರ 30000 ನೀಡುತ್ತಿದ್ದ ವೇಳೆ ಲೋಕಾಯುಕ್ತರಿಗೆ ಸಿಲುಕಿಕೊಂಡಿದ್ದಾರೆ.
