ಮಹಿಳೆ ಸರ ಕಸಿದು ಸರಗಳ್ಳರು ಪರಾರಿ

ತುಮಕೂರು: ಮಹಿಳೆ ಯೋಬ್ಬರು ಸಿಟಿ ಬಸ್ ಹತ್ತುವಾಗ ಸರಗಳ್ಳರು ಚಿನ್ನದ ಸರವನ್ನು ಕಟ್ ಮಾಡಿಕೊಂಡು ಪರಾರಿಯಾಗಿರುವ ಘಟನೆ ಇಲ್ಲಿನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಸಪ್ತಗಿರಿ ಬಡಾವಣೆಯ ಕೆಇಬಿ ಲೇಔಟ್ ವಾಸಿ ಶಾಂತಮ್ಮ ಎಂಬುವರು ಸಪ್ತಗಿರಿ ಬಡಾವಣೆಗೆ ತೆರಳಲು ನಗರದ ಕೆಎಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸಿಟಿ ಬಸ್ ಹತ್ತುವಾಗ ಆಕೆಯ ಕೊರಳಲ್ಲಿದ್ದ 61 ಗ್ರಾಂ ಚಿನ್ನದ ಸರವನ್ನು ಸರಗಳ್ಳರು ಕಟ್ ಮಾಡಿಕೊಂಡು ಪರಾರಿಯಾಗಿದ್ದಾರೆ.

ಆಗಸ್ಟ್ 31 ರಂದು ಈ ಕೃತ್ಯ ನಡೆದಿದ್ದು ನಿನ್ನೆ ತುಮಕೂರು ನಗರ ಠಾಣೆ ಪೊಲೀಸರಿಗೆ ಶಾಂತಮ್ಮ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲೆಸಿಕೊಂಡು ಸರಗಳ್ಳರ ಪತ್ತೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ,
ಘಟನೆ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.