ಪೊಲೀಸ್ ಕ್ರೀಡಾಕೂಟದ ಹಿಂದಿನ ದಿನ ಪೊಲೀಸ್ ಅಧಿಕಾರಿಗಳ ನಡುವೆ ಕಿತ್ತಾಟ

ಪೊಲೀಸ್ ಕ್ರೀಡಾಕೂಟ ಮುನ್ನ ದಿನ ಪೊಲೀಸ್ ಅಧಿಕಾರಿಗಳ ನಡುವೆ ಕಿತ್ತಾಟ

ತುಮಕೂರು : ತುಮಕೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಈ ಬಾರಿ ಕಾರಣಾಂತರದಿಂದ ಎರಡು ಬಾರಿ ಮುಂದೂಡಿ ನಾಳೆಯಿಂದ ಮೂರು ದಿನ ನಗರದ ಡಿಎಆರ್ ಮೈದಾನದಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟ ನಡೆಯಲಿದೆ.

ನಾಳಿನ ಕ್ರೀಡಾಕೂಟದಲ್ಲಿ ಕಬ್ಬಡಿ ಆಡಲು ತಂಡಗಳ ಆಯ್ಕೆಗಾಗಿ ನೆನ್ನೆ – ಇವತ್ತು ಕಬಡ್ಡಿ ಆಡಿಸಲಾಯಿತು ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳ ನಡುವೆ ಕಿತ್ತಾಟ ನಡೆದಿದೆ.

ಕಬ್ಬಡಿ ಆಡುವಾಗ ಕೆಲ ಅಧಿಕಾರಿಗಳು ತಮ್ಮ ವೈಯಕ್ತಿಕ ದ್ವೇಷ ಮುಂದಿಟ್ಟುಕೊಂಡು ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ .ಈ ಸಂದರ್ಭದಲ್ಲಿ ಓರ್ವಹಿರಿಯ ಅಧಿಕಾರಿ ಕಿತ್ತಾಟವನ್ನು ಬಿಡಿಸಲು ಮುಂದಾದಾಗ ಮತ್ತೋರ್ವ ಪೊಲೀಸ್ ಅಧಿಕಾರಿ ಕಿತ್ತಾಟ ಬಿಡಿಸಲು ಮುಂದಾದ ಹಿರಿಯ ಪೊಲೀಸ್ ಅಧಿಕಾರಿಯ ವಿರುದ್ಧ ತಿರುಗು ಬಿದ್ದರು.

ಇದನ್ನೆಲ್ಲಾ ಗಮನಿಸುತ್ತಿದ್ದ ಜಿಲ್ಲಾ ಎಸ್ ಪಿ ರವರು ಪೊಲೀಸ್ ಅಧಿಕಾರಿಗಳಿಗೆ ತಮ್ಮ ಅತಿರೇಕದ ವರ್ತನೆಯನ್ನು ನಿಲ್ಲಿಸುವಂತೆ ಸೂಚಿಸಿದರು. ಆದರೂ ಪ್ರಯೋಜನವಾಗಲಿಲ್ಲ ಕೂಡಲೇ ಮೈಕ್ ಹಿಡಿದು “ಅಧಿಕಾರಿಗಳು ತಮ್ಮ ಅತಿರೇಕದ ವರ್ತನೆಯನ್ನು ಮುಂದುವರಿಸಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು” ಆಗ ಸ್ವಲ್ಪ ಮಟ್ಟಿಗೆ ಕಿತ್ತಾಟ ಶಮನವಾದರೂ ದ್ವೇಷ ಮಾತ್ರ ಬೂದಿ ಮುಚ್ಚಿದ ಕೆಂಡದಂತಿರುವುದು ಎದ್ದು ಕಾಣುತ್ತಿತ್ತು.

ನಂತರ ಆಯ್ಕೆಯ ಪ್ರಕ್ರಿಯೆ ಮುಂದುವರಿಸಲಾಯಿತು ಆಗ ಓರ್ವ ಕಾನ್ಸ್ಟೇಬಲ್ ನ ಬೆರಳಿನ ಮೂಳೆ ಮುರಿದಿದ್ದು ಚಿಕಿತ್ಸೆಗಾಗಿ ಸಿದ್ಗಂಗಾ ಆಸ್ಪತ್ರೆಗೆ ಸೇರಿಸಲಾಗಿದೆ.

ಅಲ್ಲಿಗೆ ಬಂದ ಕೆಲ ಅಧಿಕಾರಿಗಳು ಅಧಿಕಾರಿಗಳು ಹೇಳುವ ಪ್ರಕಾರ “ಇವರು ಕ್ರೀಡಾಕೂಟಕ್ಕೆ ಬಂದಿಲ್ಲ ತಮ್ಮ ವೈಯಕ್ತಿಕ ದ್ವೇಷ ಸಾಧಿಸಲು ಬಂದಿದ್ದಾರೆ” ಎಂಬ ಮಾತುಗಳನ್ನಾಡುತ್ತಿದ್ದರು ಇವತ್ತಿನ ಘಟನೆಯನ್ನು ಸೂಕ್ಷ್ಮವಾಗಿ ನೋಡಿದರೆ ಕೆಲ ಪೊಲೀಸ್ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಓರ್ವ ಉನ್ನತ ಪೊಲೀಸ್ ಅಧಿಕಾರಿಯ ವಿರುದ್ಧ ದ್ವೇಷ ಸಾಧಿಸಲು ಮುಂದಾಗಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು.

ಅಧಿಕಾರಿಗಳ ನಡುವಿನ ಕಿತ್ತಾಟ ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇರುವುದಂತೂ ಗ್ಯಾರೆಂಟಿ ಈ ಸಂಬಂಧ ಪತ್ರಿಕೆ ಲಭಿಸಿರುವ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಜನತೆಯ ಮುಂದೆ ಇಡಲಾಗುವುದು.