ನಾಲ್ವರು ಡಕಾಯಿತರ ಬಂಧನ

ತುಮಕೂರು: ಕ್ಯಾತ್ಸಂದ್ರ ಪೊಲೀಸರು 9 ಮಂದಿ ಅಂತರರಾಜ್ಯ ದರೋಡೆ ಕೋರರ ಪೈಕಿ ನಾಲ್ಕು ಮಂದಿಯನ್ನು ಪತ್ತೆ ಹಚ್ಚಿ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನಿಂದ ಕಾರಿನಲ್ಲಿ ಬರುತ್ತಿದ್ದ ದಂಪತಿಗಳನ್ನು ಅಡ್ಡಗಟ್ಟಿ 70 ಗ್ರಾಂ ಚಿನ್ನ, ಕಾರನ್ನು ಕಸಿದುಕೊಂಡು ಡಕಾಯಿತರು ಪರಾರಿಯಾಗಿದ್ದರು. ಕ್ಯಾತ್ಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಘಟನೆ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಅಡಿಷನಲ್ ಎಸ್ ಪಿ. ಪುರುಷೋತ್ತಮ್, ನಗರ ಡಿ ವೈ ಎಸ್ ಪಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಿದ ಕ್ಯಾತ್ಸಂದ್ರ ಸಿಪಿಐ ರಾಘವೇಂದ್ರ. ಪಿಎಸ್ಐ ಪ್ರಸನ್ನ, ಟೌನ್ ಸಿಪಿಐ ಅವಿನಾಶ್ ಮತ್ತು ಸಿಬ್ಬಂದಿ ವರ್ಗ ನಾಲ್ಕು ಮಂದಿಯನ್ನು ಪತ್ತೆ ಹಚ್ಚಿ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಾದ ವಿವೇಕ್ (೨೬) ರಾಹುಲ್ (೨೬) ರಜತ್ (೨೬) ನಿವೇದ್ (೨೪) ಎಲ್ಲರೂ ಕೇರಳ ರಾಜ್ಯದವರೆನ್ನ ಲಾಗಿದೆ. ನಾಲ್ವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಇಡೀ ಪ್ರಕರಣ ಬಯಲಾಯಿತನ್ನಲಾಗಿದೆ. ಉಳಿದ ಐದು ಮಂದಿ ತಲೆಮರಸಿಕೊಂಡಿದ್ದು ಅವರ ಪತ್ತೆಗಾಗಿ ಪೊಲೀಸರು ಶ್ರಮಿಸುತ್ತಿದ್ದು ಅವರ ಬಂಧನದ ನಂತರ ಚಿನ್ನದ ಆಭರಣ ಪತ್ತೆಯಾಗಲಿದೆ ಎಂದು ತಿಳಿದುಬಂದಿದೆ.