ಜೂಜು ಅಡ್ಡೆ ಮೇಲೆ ಹಿರಿಯ ಪೊಲೀಸ ಅಧಿಕಾರಿಗಳೇ ಖುದ್ದು ದಾಳಿ

ತುಮಕೂರು : ತುಮಕೂರು ಜಿಲ್ಲೆಯಲ್ಲಿ ಇತ್ತೀಚೆಗೆ ಜೂಜಾಟ ಅಧಿಕವಾಗಿದ್ದು ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಕೈ ಚೆಲ್ಲಿ ಕುಳಿತಿರುವಂತೆ ಕಾಣುತ್ತಿದೆ.

ಇಂದು ಕ್ಯಾಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂಜಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸೆನ್ ಪೊಲೀಸರೊಂದಿಗೆ ಜಿಲ್ಲೆಯ ಹಿರಿಯ ಪೊಲೀಸ ಅಧಿಕಾರಿಗಳೇ ಖುದ್ದು ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಜೂಜಾಟದಲ್ಲಿ ತೊಡಗಿದ್ದ ಸುಮಾರು ೪೬ ಮಂದಿಯನ್ನು ಬಂಧಿಸಿದ್ದು ಜೂಜಾಡಿಸುತ್ತಿದ್ದ ದರ್ಶನ್ ಅಲಿಯಾಸ್ ಪಾರಿವಾಳ, ಕ್ಯಾಟ್ ರಾಜ ಪ್ರಮುಖರು ಎಂದು ಹೇಳಲಾಗುತ್ತಿದೆ.

ಜೂಜು ಅಡ್ಡಿ ಮೇಲೆ ಹಿರಿಯ ಪೊಲೀಸ ಅಧಿಕಾರಿಗಳೇ ಖುದ್ದು ದಾಳಿ
ಜೂಜು ಅಡ್ಡಿ ಮೇಲೆ ಹಿರಿಯ ಪೊಲೀಸ ಅಧಿಕಾರಿಗಳೇ ಖುದ್ದು ದಾಳಿ

ದಾಳಿ ವೇಳೆ ಸುಮಾರು ೨೬ ಲಕ್ಷಕ್ಕೂ ಅಧಿಕ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಈ ಜೂಜಾಟದ ಹಿಂದೆ ಕೆಲ ಪೊಲೀಸರ ಕುಮಕ್ಕು ಇರುವುದನ್ನ ತಿಳಿದು ಹಿರಿಯ ಪೋಲಿಸ್ ಅಧಿಕಾರಿಗಳೇ ಸ್ವತಹ ಜೂಜು ಅಡ್ಡೆಯ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಜೂಜಾಟಕ್ಕೆ ಕುಮ್ಮಕ್ಕು ಕೊಡುತ್ತಿದ್ದ ಪೊಲೀಸರ ಮೇಲೆ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.