ತುಮಕೂರು: ನಗರದ ಎರಡನೇ ವಾರ್ಡಿನಲ್ಲಿರುವ ಐಡಿಎಸ್ ಎಂಟಿ ಲೆ ಔಟ್ ನಲ್ಲಿ ಹಲವು ವರ್ಷಗಳ ಹಿಂದೆ ಖಾಸಗಿ ವ್ಯಕ್ತಿಗೆ ಪ್ರಸ್ತುತ ಕೋಟ್ಯಾಂತರ ರೂ ಬೆಲೆ ಬಾಳುವ ಸಿಎ ನಿವೇಶನ ವನ್ನು ಕೇವಲ ಏಳು ಲಕ್ಷ ರೂಗಳಿಗೆ ಅಂದಿನ ನಗರಸಭೆ ಅಧಿಕಾರಿಗಳು ಕ್ರಯ ಮಾಡಿಕೊಟ್ಟ ಹಿನ್ನೆಲೆಯಲ್ಲಿ ದಾಖಲಾತಿಗಳನ್ನು ಪರಿಶೀಲಿಸಿ ವಶಪಡಿಸಿಕೊಳ್ಳಲು ಇಂದು ತುಮಕೂರು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ದಿಡೀರ್ ದಾಳಿ ನಡೆಸಿ ಪರಿಶೀಲಿಸಿರುವ ಘಟನೆ ನಡೆದಿದೆ.
ಲೋಕಾಯುಕ್ತ ಎಸ್ ಪಿ ಮಲ್ಲೇಶ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮಂಜುನಾಥಗೌಡ ಮತ್ತು ಸಿಬ್ಬಂದಿ ಇಂದು ಮಹಾನಗರ ಪಾಲಿಕೆ ಕಂದಾಯ ಶಾಖೆಗೆ ದಾಳಿ ನಡೆಸಿ ದಾಖಲಾತಿಗಳನ್ನು ಪರಿಶೀಲಿಸಿ ಕೆಲವು ದಾಖಲಾತಿಗಳನ್ನು ನೀಡಲು ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿ ಹೋದರನ್ನಲಾಗಿದೆ.
ಸದರಿ ಸಿಎ ಸೈಟು ಹಲವು ವರ್ಷಗಳಿಂದ ಕಾಲಿ ಬಿದ್ದಿದೆ ಅಲ್ಲಿ ಚಿತ್ರಮಂದಿರ ಅಥವಾ ಸಮುದಾಯ ಭವನ ನಿರ್ಮಿಸುವುದಾಗಿ ಅರ್ಜಿ ಹಾಕಿ ಖಾಸಗಿ ವ್ಯಕ್ತಿಯೊಬ್ಬರು ಸೈಟು ಪಡೆದಿದ್ದರನ್ನ ಲಾಗಿದೆ. ಈವರೆಗೂ ಆ ಜಾಗದಲ್ಲಿ ಚಿತ್ರಮಂದಿರವೂ ಇಲ್ಲ, ಸಮುದಾಯ ಭವನವು ನಿರ್ಮಾಣವಾಗಿಲ್ಲ.
ಈ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಕೇಸ್ ಹಾಕಿದ್ದು ಪ್ರಕರಣ ನ್ಯಾಯಾಲಯದಲ್ಲಿದೆ. ಲೋಕಾಯುಕ್ತಕ್ಕೂ ಈ ಬಗ್ಗೆ ದೂರು ಸಲ್ಲಿಸಿದ್ದರಿಂದ ದಾಖಲಾತಿಗಳನ್ನು ಪರಿಶೀಲಿಸಿ ವಶಪಡಿಸಿಕೊಳ್ಳಲು ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ಮಾಡಿದ್ದರನ್ನಲಾಗಿದೆ.
ಪ್ರಸ್ತುತ ಈ ಸಿಎ ಜಾಗವನ್ನು ಪಾಲಿಕೆ ಅಧಿಕಾರಿಗಳು ಗೋಲ್ಮಾಲ್ ಮಾಡಲು ಮುಂದಾಗಿದ್ದರಿಂದ ಎಚ್ಚೆತ್ತು ಸಾಮಾಜಿಕ ಕಾರ್ಯಕರ್ತ ಕೋರ್ಟ್ ನಲ್ಲಿ ಮತ್ತು ಲೋಕಾಯುಕ್ತದಲ್ಲಿ ಕೇಸ್ ಹಾಕಿದ್ದಾರೆ ಎಂದು ನಂಬಲಾರ್ಕ ಮೂಲಗಳಿಂದ ತಿಳಿದು ಬಂದಿದೆ.
