ತುಮಕೂರು: ಇಲ್ಲಿನ ಮಹಾನಗರ ಪಾಲಿಕೆಯ ಕೆಲವು ವಿಭಾಗಗಳಿಗೆ ಎರಡನೇ ವಾರ್ಡಿಗೆ ಸಂಬಂಧಿಸಿದ ದಾಖಲಾತಿಗಳನ್ನು ಸ್ವತಹ ಪರಿಶೀಲಿಸಿ ವಶಪಡಿಸಿಕೊಳ್ಳಲು ತುಮಕೂರು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿರುವ ಘಟನೆ ನಡೆದಿದೆ.
ಕಳೆದ ಮೂರು- ನಾಲ್ಕು ವರ್ಷಗಳಿಂದ ಲೋಕಾಯುಕ್ತದ ಅಧಿಕಾರಿಗಳು ದಾಖಲಾತಿಗಳನ್ನು ಕೇಳಿದರು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊಡದೆ ಆಟವಾಡಿಸಿದ್ದಾರೆ? ಇದರಿಂದ ಬೇಸತ್ತ ತುಮಕೂರು ಲೋಕಾಯುಕ್ತ ಅಧಿಕಾರಿಗಳು ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಇಂದು ತುಮಕೂರು ಮಹಾನಗರ ಪಾಲಿಕೆಗೆ ದಿಢೀರ್ ದಾಳಿ ನಡೆಸಿ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ತುಮಕೂರು ಲೋಕಯುಕ್ತ ಎಸ್ ಪಿ ಮಲ್ಲೇಶ್, ಡಿ ವೈ ಎಸ್ ಪಿ ಗಳಾದ ಮಂಜುನಾಥಗೌಡ, ಸಂತೋಷ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ರಾಘವೇಂದ್ರ, ನಿರ್ಮಲ, ರಾಜು ಮತ್ತು ಸಿಬ್ಬಂದಿ ವರ್ಗ ತನಿಕಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಸಂಜೆ ವೇಳೆಗೆ ತಿಳಿಯುತ್ತದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
